ಕೊರೊನಾ ಕಾಟದ ನಡುವೆಯೂ ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟವು 2020 ಕ್ಕೆ ಹೋಲಿಸಿದರೆ 2021ರಲ್ಲಿ ದ್ವಿಗುಣಕ್ಕಿಂತ ಹೆಚ್ಚಾಗಿದೆ ಎಂದು ಎಲೆಕ್ಟ್ರಿಕ್ ವಾಹನಗಳ ಉತ್ಪಾದಕರ ಸಂಘ (ಎಸ್‌ಎಂಇವಿ) ನೀಡಿದ ದತ್ತಾಂಶ ತಿಳಿಸುತ್ತಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಬ್ಸಿಡಿಗಳ ನೆರವಿನಿಂದ ಮಾರಾಟದಲ್ಲಿ ಏರಿಕೆ ಕಾಣುತ್ತಿರುವ ಈ ವಾಹನಗಳ 2,34,000 ಘಟಕಗಳು 2021ರಲ್ಲಿ ಮಾರಾಟವಾಗಿವೆ. 2020ರಲ್ಲಿ ಇವಿಗಳ 1,00,00 0ದಷ್ಟು ಘಟಕಗಳು ಮಾತ್ರವೇ ಮಾರಾಟವಾಗಿದ್ದವು.
ಅಮೆರಿಕದಲ್ಲಿ ಒಮಿಕ್ರಾನ್ ಸ್ಫೋಟ…! ದಿನೇ ದಿನೇ ಏರಿಕೆಯಾಗುತ್ತಲೇ ಇದೆ ಸೋಂಕಿತರ ಸಂಖ್ಯೆ
ಇವುಗಳ ಪೈಕಿ ಐದನೇ ಮೂರರಷ್ಟು ವಾಹನಗಳು ಹೈ-ಸ್ಪೀಡ್ ವಾಹನಗಳಾದ ಅತೆರ್ 450 ಮತ್ತು ಬಜಾಜ್ ಚೇತಕ್‌ನವಾಗಿವೆ. ಕಳೆದ ವರ್ಷದಲ್ಲಿ ಐದು ಪಟ್ಟಿಗಿಂತ ಹೆಚ್ಚಿನ ಮಟ್ಟದಲ್ಲಿ ಮಾರಾಟದಲ್ಲಿ ಏರಿಕೆ ಕಂಡ ಹೈ-ಸ್ಪೀಡ್ ಕೆಟಗರಿಯ 1,43,000 ಇವಿಗಳು ಮಾರಾಟವಾಗಿವೆ.
25ಕಿಮೀ/ಗಂಟೆಗಿಂತ ಹೆಚ್ಚಿನ ವೇಗದಲ್ಲಿ ಚಲಿಸಲಾರದ ಲೋ-ಸ್ಪೀಡ್ ವರ್ಗದ ಸ್ಕೂಟರ್‌ಗಳ ಮಾರಾಟದಲ್ಲಿ 25%ನಷ್ಟು ವೃದ್ಧಿಯಾಗಿದ್ದು, 91,000 ಘಟಕಗಳಷ್ಟು ಮಾರಾಟವಾಗಿವೆ. ಚೀನಾದಿಂದ ಆಮದಾಗುತ್ತಿರುವ ಅಗ್ಗದ ಇವಿಗಳನ್ನು ಈ ಅಂಕಿಅಂಶಗಳು ಒಳಗೊಂಡಿಲ್ಲ.