ವಿಶ್ಲೇಷಣೆಗೊಳಪಟ್ಟ ಅವಧಿಯಲ್ಲಿ ಲೋ-ಸ್ಪೀಡ್ ಮತ್ತು ಹೈ-ಸ್ಪೀಡ್ ವರ್ಗಗಳಲ್ಲಿ ಸೇರಿದಂತೆ 2,33,971 ದ್ವಿಚಕ್ರ ಇವಿಗಳು ಮಾರಾಟವಾಗಿವೆ. 2020ರಲ್ಲಿ ಇವಿಗಳ 1,00,000ದಷ್ಟು ಘಟಕಗಳು ಮಾತ್ರವೇ ಮಾರಾಟವಾಗಿದ್ದವು.
ಇವುಗಳ ಪೈಕಿ ಐದನೇ ಮೂರರಷ್ಟು ವಾಹನಗಳು ಹೈ-ಸ್ಪೀಡ್ ವಾಹನಗಳಾದ ಅತೆರ್ 450 ಮತ್ತು ಬಜಾಜ್ ಚೇತಕ್ನವಾಗಿವೆ. ಕಳೆದ ವರ್ಷದಲ್ಲಿ ಐದು ಪಟ್ಟಿಗಿಂತ ಹೆಚ್ಚಿನ ಮಟ್ಟದಲ್ಲಿ ಮಾರಾಟದಲ್ಲಿ ಏರಿಕೆ ಕಂಡ ಹೈ-ಸ್ಪೀಡ್ ಕೆಟಗರಿಯ 1,43,000 ಇವಿಗಳು ಮಾರಾಟವಾಗಿವೆ.
ದಶಕದಲ್ಲೇ ಅತ್ಯಂತ ಕಡಿಮೆ ಮಾರಾಟ ಕಂಡ ಆಟೋಮೊಬೈಲ್ ಮಾರುಕಟ್ಟೆ; ಇದರ ಹಿಂದಿದೆ ಈ ಎಲ್ಲ ಕಾರಣ
25ಕಿಮೀ/ಗಂಟೆಗಿಂತ ಹೆಚ್ಚಿನ ವೇಗದಲ್ಲಿ ಚಲಿಸಲಾರದ ಲೋ-ಸ್ಪೀಡ್ ವರ್ಗದ ಸ್ಕೂಟರ್ಗಳ ಮಾರಾಟದಲ್ಲಿ 25%ನಷ್ಟು ವೃದ್ಧಿಯಾಗಿದ್ದು, 91,000 ಘಟಕಗಳಷ್ಟು ಮಾರಾಟವಾಗಿವೆ. ಚೀನಾದಿಂದ ಆಮದಾಗುತ್ತಿರುವ ಅಗ್ಗದ ಇವಿಗಳನ್ನು ಈ ಅಂಕಿಅಂಶಗಳು ಒಳಗೊಂಡಿಲ್ಲ.