alex Certify ವೈಯಕ್ತಿಕ ಮಾಹಿತಿಗಳನ್ನ ಹಂಚಿಕೊಳ್ಳುವ ಮುನ್ನ ಈ ಸುದ್ದಿ ಓದಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈಯಕ್ತಿಕ ಮಾಹಿತಿಗಳನ್ನ ಹಂಚಿಕೊಳ್ಳುವ ಮುನ್ನ ಈ ಸುದ್ದಿ ಓದಿ…!

ಮಹತ್ವದ ದಾಖಲೆಗಳನ್ನ ಯಾರಿಗಾದರೂ ಇ ಮೇಲ್​ ಮಾಡುವಾಗ ಕೊಂಚ ಜಾಗರೂಕರಾಗಿ ಇರೋದು ಒಳಿತು. ಏಕೆಂದರೆ ಕೊಂಚ ಯಾಮಾರಿದ್ರೂ ಗೌಪ್ಯ ಮಾಹಿತಿ ಬೇರೆಯವರ ಇ ಮೇಲ್​ ಹೋಗುವ ಸಾಧ್ಯತೆ ಇರುತ್ತದೆ. ಇದೇ ರೀತಿಯ ಘಟನೆಯೊಂದರಲ್ಲಿ ಕಂಪನಿಯೊಂದು ತನ್ನ ಗ್ರಾಹಕರ ಹೆಸರು, ವಿಳಾಸ, ಮೇಲ್​ ಅಡ್ರೆಸ್​ ಸೇರಿದಂತೆ ಎಲ್ಲಾ ಮಾಹಿತಿಯನ್ನ ತಪ್ಪಾಗಿ ತನ್ನ ಇನ್ನೊಂದು ಗ್ರಾಹಕನಿಗೆ ಕಳುಹಿಸಿಬಿಟ್ಟಿದೆ.

ಎಲೆಕ್ಟ್ರಿಕ್​​ ಸ್ಕೇಟ್​ಬೋರ್ಡ್​ ಕಂಪನಿಯು ಗ್ರಾಹಕ ಖರೀದಿ ಮಾಡಿದ ಸ್ಕೇಟ್​ ಬೋರ್ಡ್​ ವಾರಂಟಿ ಕಾರ್ಡ್​ ನೋಂದಣಿ ಮಾಡಲು ಇ ಮೇಲ್​ ಮಾಡುವ ಬದಲು ಕಾಪಿ ಪೇಸ್ಟ್​ ಮಾಡಿದ ಪರಿಣಾಮ ಕಂಪನಿಯ ಎಲ್ಲಾ ಗ್ರಾಹಕರ ಸಂಪೂರ್ಣ ಮಾಹಿತಿ ಆ ಗ್ರಾಹಕನಿಗೆ ಕಳುಹಿಸಿದೆ.

ಗ್ರಾಹಕನಿಗೆ ಕಂಪನಿಯು ಕಳುಹಿಸಿದ ವರದಿಯಲ್ಲಿ 2014 ರಿಂದ ಕಳೆದ ವಾರದವರೆಗೆ ಮಾಡಲಾದ ಒಟ್ಟು 50 ಸಾವಿರ ಗ್ರಾಹಕರ ಮಾಹಿತಿಯು ಇದೆ. ಎಲೆಕ್ಟ್ರಿಕ್​ ಸ್ಕೇಟ್​ಬೋರ್ಡ್​ ಕಂಪನಿಯು ಈ ಪ್ರಮಾದವನ್ನ ಎಸಗಿದೆ. ಹಾಗೂ ಸಿಬ್ಬಂದಿ ತಮ್ಮ ಕಡೆಯಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಗ್ರಾಹಕನಿಗೆ ಕಳುಹಿಸಲಾದ ಲಿಂಕ್​ನ್ನು ಕಂಪನಿ ಡಿಲೀಟ್​ ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...