ಕಲಬುರಗಿ: ವಿದ್ಯುತ್ ಪ್ರವಹಿಸಿ ತಾಯಿ, ಇಬ್ಬರು ಮಕ್ಕಳು ಸಾವು ಕಂಡ ಘಟನೆ ಕಲಬುರ್ಗಿ ಜಿಲ್ಲೆ ಚಿಂಚೋಳಿ ಪಟ್ಟಣದ ದನಗರ ಗಲ್ಲಿಯಲ್ಲಿ ನಡೆದಿದೆ.
ಕರೆಂಟ್ ಶಾಕ್ ನಿಂದ ತಾಯಿ ಝರಣಮ್ಮ ಅಂಬಣ್ಣ(44), ಮಕ್ಕಳಾದ ಸುರೇಶ್(16), ಮಹೇಶ್(18) ಮೃತಪಟ್ಟಿದ್ದಾರೆ.
ರಾತ್ರಿ ಸುರಿದ ಮಳೆಗೆ ವಿದ್ಯುತ್ ತಂತಿ ಕಟ್ ಆಗಿ ಬಿದ್ದಿದ್ದು, ನೀರಿಗೆ ಬಿದ್ದಿದ್ದ ತಂತಿಯಿಂದ ವಿದ್ಯುತ್ ಹರಿದು ತಾಯಿ, ಮಕ್ಕಳು ಮೃತಪಟ್ಟಿದ್ದಾರೆ. ದನಗಳಿಗೆ ಮೇವು ತರಲು ಹೋದಾಗ ದುರಂತ ಸಂಭವಿಸಿದೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.