
ಬೆಳಗಾವಿ: ವಾಟರ್ ಹೀಟರ್ ಮುಟ್ಟಿದ ಮಹಿಳೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.
ರೇಖಾ ಹುಡೆದ(52) ಮೃತಪಟ್ಟ ಮಹಿಳೆ. ವಿದ್ಯುತ್ ಪ್ರವಹಿಸಿ ಅವರು ಮೃತಪಟ್ಟಿದ್ದಾರೆ. ಮನೆಯಲ್ಲಿ ವಾಟರ್ ಹೀಟರ್ ಹಿಡಿದ ವೇಳೆ ಕರೆಂಟ್ ಶಾಕ್ ನಿಂದ ಅವರು ಸಾವನ್ನಪ್ಪಿದ್ದಾರೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.