alex Certify ಭಾರತದಲ್ಲಿ ಇವಿ ಕಾರುಗಳ ಜೋಡಣೆಗೆ ಚಿಂತನೆ ಮಾಡುತ್ತಿದೆ ಆಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಇವಿ ಕಾರುಗಳ ಜೋಡಣೆಗೆ ಚಿಂತನೆ ಮಾಡುತ್ತಿದೆ ಆಡಿ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಟ್ರಂಡ್ ದಿನೇ ದಿನೇ ಏರಿಕೆಯಾಗುತ್ತಿದೆ ಎಂದು ಈಗಿನ ಸಂದರ್ಭದಲ್ಲಿ ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲ. ಇದಕ್ಕೆ ತಕ್ಕಂತೆ ಸ್ಟಾರ್ಟ್‌ಅಪ್‌ಗಳಿಂದ ಹಿಡಿದು ಆಟೋಮೊಬೈಲ್‌ ದಿಗ್ಗಜ ಸಂಸ್ಥೆಗಳವರೆಗೂ ಎಲೆಕ್ಟ್ರಿಕ್ ವಾಹನದ ಮಾರುಕಟ್ಟೆಯಲ್ಲಿ ತಮ್ಮ ಹೆಜ್ಜೆ ಗುರುತನ್ನು ಇಡಲು ಮುಂದಾಗಿವೆ.

ಜರ್ಮನಿಯ ಆಟೋಮೊಬೈಲ್ ದಿಗ್ಗಜ ಆಡಿ ಭಾರತದಲ್ಲಿ ಇನ್ನ ಎಲೆಕ್ಟ್ರಿಕ್ ವಾಹನಗಳ ಜೋಡಣೆ ಮಾಡುವ ಚಿಂತನೆ ನಡೆಸಿದೆ. ತನ್ನ ಇವಿ ವಾಹನಗಳಿಗೆ ದೇಶದಲ್ಲಿರುವ ಬೇಡಿಕೆಯನ್ನು ಸೂಕ್ಷ್ಮವಾಗಿ ಗಮನಿಸಿರುವ ಆಡಿ ಇಂಡಿಯಾ, ಭಾರತಕ್ಕೆ ಉತ್ಪಾದನೆ ಮಾಡುವ ಇವಿ ವಾಹನಗಳ ಸಂಖ್ಯೆಯನ್ನು ಏರಿಸಲು ಚಿಂತಿಸುತ್ತಿದೆ.

ಸುದೀರ್ಘಾವಧಿಗೆ ದೊಡ್ಡ ಪ್ಲಾನ್‌ ಅನ್ನೇ ಹೊಂದಿರುವ ಆಡಿ, ಭಾರತದಲ್ಲಿ ಇನ್ನ ಇವಿ ವಾಹನಗಳನ್ನು ಜೋಡಣೆ ಮಾಡುವ ಸಂಬಂಧ ಸಾಧಕ ಬಾಧಕಗಳ ಬಗ್ಗೆ ಚಿಂತನ ಮಂಥನಕ್ಕೆ ಮುಂದಾಗಿದೆ. ದೇಶದಲ್ಲಿ ವಾಹನಗಳ ಎಲೆಕ್ಟ್ರೀಕರಣಕ್ಕೆ ಪ್ರೋತ್ಸಾಹ ನೀಡಲು ಅಲ್ಪಕಾಲಿಕ ತೆರಿಗೆ ಬೆಂಬಲಕ್ಕಾಗಿ ಎದುರು ನೋಡುತ್ತಿದೆ ಎನ್ನಲಾಗಿದೆ.

ಕೃಷಿ ಕಾಯ್ದೆ ವಿರುದ್ಧ ಮತ್ತೆ ಬೀದಿಗಿಳಿದ ಅನ್ನದಾತ; ರಾಜ್ಯದ ಹಲವೆಡೆ ರಸ್ತೆ ತಡೆ; ಬಾರುಕೋಲು ಚಳುವಳಿ ನಡೆಸಿ ಆಕ್ರೋಶ

ಆಡಿ ಕ್ಯೂ5 ಕಾರಿನ ಲಾಂಚ್‌ ಸಂದರ್ಭದಲ್ಲಿ ಮಾತನಾಡಿದ ಆಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್‌ ಸಿಂಗ್ ಧಿಲ್ಲೋನ್, “ದೇಶದಲ್ಲಿ ಆಡಿಯ ಇವಿಗಳಿಗೆ ಸಿಕ್ಕಿರುವ ಪ್ರತಿಕ್ರಿಯೆ ನಿರೀಕ್ಷೆಗಿಂತಲೂ ದೊಡ್ಡದಿದ್ದು, ಹೀಗಾಗಿ, ಸ್ಥಳೀಯವಾಗಿ ಇವಿಗಳನ್ನು ಉತ್ಪಾದಿಸುವ ಸಾಧ್ಯತೆಗಳ ಕುರಿತಂತೆ ಆಡಿ ಚಿಂತನೆ ನಡೆಸಿದೆ.

ಮುಂದಿನ ದಿನಗಳಲ್ಲಿ ಇವಿಗಳು ಈಗಿನ ಮೂರು-ನಾಲ್ಕು ಪಟ್ಟು ಪ್ರಮಾಣದಲ್ಲಿ ಉತ್ಪಾದನೆಯಾಗುವ ಅಂದಾಜಿದೆ. ದಿಕ್ಕು ಹಾಗೂ ಸಂಖ್ಯೆಗಳು ನಿಜಕ್ಕೂ ಪ್ರೋತ್ಸಾಹದಾಯಕವಾಗಿವೆ. ಕಾರುಗಳ ಮೇಲೆ 60-110%ನಷ್ಟು ಆಮದು ಸುಂಕ ಬೀಳುತ್ತದೆ. ಹೀಗಾಗಿ, ಸ್ಥಳೀಯವಾಗಿ ಇನ್ನಷ್ಟು ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಮೂರರಿಂದ ಐದು ವರ್ಷಗಳ ಮಟ್ಟಿಗೆ ತೆರಿಗೆ ಸಡಿಲಿಕೆ ನೀಡಲು ಸಾಧ್ಯವೇ ಎಂದು ಸರ್ಕಾರವನ್ನು ಮನವಿ ಮಾಡುತ್ತಿದ್ದೇವೆ,” ಎಂದಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...