
ವಿಜಯಪುರ: ಚಾರ್ಜ್ ವೇಳೆಯಲ್ಲೇ ಎಲೆಕ್ಟ್ರಿಕ್ ಬೈಕ್ ಗೆ ಬೆಂಕಿ ತಗುಲಿದ ಘಟನೆ ವಿಜಯಪುರದ ಸಾಯಿ ಪಾರ್ಕ್ ಬಳಿ ಬೇಕರಿಯಲ್ಲಿ ನಡೆದಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಎಲೆಕ್ಟ್ರಿಕ್ ಬೈಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಾರ್ಜ್ ಗೆ ಹಾಕಿದಾಗ ಎಲೆಕ್ಟ್ರಿಕ್ ಬೈಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಸ್ಥಳೀಯ ನಿವಾಸಿಗಳು ಬೆಂಕಿಯನ್ನು ನಂದಿಸಿದ್ದಾರೆ. ಅಷ್ಟರಲ್ಲಿ ಎಲೆಕ್ಟ್ರಿಕ್ ಬೈಕ್ ಸಂಪೂರ್ಣ ಕರಕಲಾಗಿದೆ.