ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ(ಇಸಿಐ) ಪ್ರಕಟಿಸಿದ ಎಲೆಕ್ಟೋರಲ್ ಬಾಂಡ್ ಪಟ್ಟಿಯು ಬಿಜೆಪಿ ಹೇಗಿದೆ ಎಂಬುದಕ್ಕೆ ಪರಿಪೂರ್ಣ ಉದಾಹರಣೆಯಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ಟೀಕಿಸಿದ್ದಾರೆ.
ಬಿಜೆಪಿಯವರು ಕ್ರೋನಿ ಕೈಗಾರಿಕೋದ್ಯಮಿಗಳು, ತೆರಿಗೆ ವಂಚಕರು ಮತ್ತು ಅಪರಾಧಿಗಳಿಂದ ಲಂಚವನ್ನು ಸಂಗ್ರಹಿಸುತ್ತಿದ್ದಾರೆ. ಇದಲ್ಲದೆ, ಚುನಾವಣಾ ಬಾಂಡ್‌ಗಳನ್ನು ಬಳಸಿಕೊಂಡು ಈ ಎಲ್ಲಾ ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸುವ ಮಾರ್ಗವನ್ನು ಪ್ರಧಾನಿ ಮೋದಿ ಕಂಡುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಎಲೆಕ್ಟೋರಲ್ ಬಾಂಡ್ಸ್ ಪೌಡರ್ ಮೂಲಕ 11562 ಕೋಟಿ ರೂ. ಕಪ್ಪು ಹಣ ಬಿಳಿಯಾಗಿ ಪರಿವರ್ತಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ದೇಣಿಗೆಗೆ ಪ್ರತಿಯಾಗಿ ಭಾರತದ ಸಂಪನ್ಮೂಲಗಳನ್ನು ಲೂಟಿ ಮಾಡಲು ಕೈಗಾರಿಕೋದ್ಯಮಿಗಳಿಗೆ ಮುಕ್ತ ಅವಕಾಶ ನೀಡುವುದು ಭಯಾನಕವಾಗಿದೆ. ಪ್ರಧಾನಿಯವರು ಹಾಗೆ ಮಾಡುವ ಮೂಲಕ ತಮ್ಮ ದೇಶದ ಮುನ್ನಡೆ ವಿಫಲಗೊಳಿಸಿದ್ದಾರೆ ಎಂದು ದೂರಿದ್ದಾರೆ.
https://twitter.com/siddaramaiah/status/1768618266065551456