
ಬೀದರ್: ಚುನಾವಣಾ ಕಾರ್ಯನಿರ್ವಹಣೆ ತರಬೇತಿಗೆ ಗೈರುಹಾಜರಾದ ಅಧಿಕಾರಿಗಳನ್ನು ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅಮಾನತುಗೊಳಿಸಿದ್ದಾರೆ.
ಬೀದರ್ ಜಿಲ್ಲೆಯ ಔರಾದ್(ಬಿ) ತಾಲೂಕಿನಲ್ಲಿ ಮಾರ್ಚ್ 18 ರಂದು ಚುನಾವಣೆ ಕಾರ್ಯನಿರ್ವಹಣೆ ಹಾಗೂ ತರಬೇತಿ ನಡೆದಿದ್ದು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ವಿಠಲ್ ರಾವ್ ಮತ್ತು ಔರಾದ್ ಸಹಾಯಕ ತೋಟಗಾರಿಕೆ ಅಧಿಕಾರಿ ರಾಜಕುಮಾರ ಅವರು ಗೈರು ಹಾಜರಾದ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.