
ನವದೆಹಲಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ನಂತರ ಬಹಿರಂಗವಾಗಿದ್ದ ಮತಗಟ್ಟೆ ಸಮೀಕ್ಷೆಗಳಲ್ಲಿ ಬಹುತೇಕ ಸುಳ್ಳಾಗಿದೆ.
ಮತದಾನ ಅವಧಿ ಮುಕ್ತಾಯವಾಗುತ್ತಿದ್ದಂತೆ ಬಹುತೇಕ ವಾಹಿನಿಗಳು, ಸಂಸ್ಥೆಗಳು ಮತದಾನೋತ್ತರ ಸಮೀಕ್ಷೆಯನ್ನು ಪ್ರಕಟಿಸಿ ಇಂತಹ ಪಕ್ಷಗಳು ಅಧಿಕಾರಕ್ಕೆ ಬರುವ ಸಂಭವವಿದೆ. ಇಷ್ಟು ಸ್ಥಾನ ಪಡೆಯಲಿವೆ ಎಂದು ಹೇಳಿದ್ದವು. ಆದರೆ, ಸಮೀಕ್ಷೆಯೇ ಸತ್ಯವಲ್ಲ, ಚುನಾವಣೆಯ ಸೋಲು ಗೆಲುವಿನ ಲೆಕ್ಕಾಚಾರ ತಿಳಿಯಲು ಫಲಿತಾಂಶದವರೆಗೂ ಕಾಯಬೇಕು ಎನ್ನುವುದು ಕೂಡ ಮುಖ್ಯವಾಗಿದೆ.
ಬಹಿರಂಗವಾಗಿದ್ದ ಮತಗಟ್ಟೆ ಸಮೀಕ್ಷೆಗಳಲ್ಲಿ ಅರ್ಧ ಸತ್ಯ, ಅರ್ಧ ಸುಳ್ಳಾಗಿದೆ. ಛತ್ತಿಸ್ ಗಡ ಕುರಿತಂತೆ ಬಹುತೇಕ ಎಲ್ಲಾ ವಾಹಿನಿಗಳ ಭವಿಷ್ಯವೂ ಸುಳ್ಳಾಗಿದೆ. ಛತ್ತಿಸ್ ಗಡದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದವು. ಆದರೆ, ಇದನ್ನು ಮೀರಿ ಛತ್ತೀಸ್ ಡದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇದೆ ಎಂದು ಸಮೀಕ್ಷೆಗಳು ಹೇಳಿದ್ದವು.
ಆದರೆ, ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ, ಟುಡೇ ಚಾಣಕ್ಯ, ಇಂಡಿಯಾ ಟಿವಿ, ಸಿಎನ್ಎಕ್ಸ್ ಮಾತ್ರ ಮಧ್ಯಪ್ರದೇಶದಲ್ಲಿ ಬಿಜೆಪಿ ಭಾರಿ ಬಹುಮತ ಪಡೆಯಲಿದೆ ಎಂದು ಹೇಳಿದ್ದು ನಿಜವಾಗಿದೆ. ಉಳಿದ ವಾಹಿನಿಗಳ ಭವಿಷ್ಯ ಸುಳ್ಳಾಗಿದೆ. ರಾಜಸ್ಥಾನ ಮತ್ತು ತೆಲಂಗಾಣ ಕುರಿತಾಗಿ ನೀಡಲಾಗಿದ್ದ ಸಮೀಕ್ಷೆ ನಿಜವಾಗಿದೆ.