alex Certify ಇವಿಎಂ ಟ್ಯಾಂಪರಿಂಗ್‌ ಆರೋಪ; ಕುತ್ತಿಗೆಗೆ ಕುಣಿಕೆ ಹಾಕಿಕೊಂಡ ಕಾಂಗ್ರೆಸ್‌ ಅಭ್ಯರ್ಥಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇವಿಎಂ ಟ್ಯಾಂಪರಿಂಗ್‌ ಆರೋಪ; ಕುತ್ತಿಗೆಗೆ ಕುಣಿಕೆ ಹಾಕಿಕೊಂಡ ಕಾಂಗ್ರೆಸ್‌ ಅಭ್ಯರ್ಥಿ

ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವಾಗ ಇವಿಎಂ ಟ್ಯಾಂಪರಿಂಗ್ ಮಾಡಿದ ಆರೋಪದ ವಿರುದ್ಧ ಗಾಂಧಿಧಾಮ್‌ನ ಕಾಂಗ್ರೆಸ್ ಅಭ್ಯರ್ಥಿ ಭಾರತಭಾಯ್ ವೆಲ್ಜಿಭಾಯ್ ಸೋಲಂಕಿ ಅವರು ತಮ್ಮ ಕುತ್ತಿಗೆಗೆ ಬಟ್ಟೆಯ ಕುಣಿಕೆ ಹಾಕಿಕೊಂಡು ಆತ್ಮಹತ್ಯೆಯ ಬೆದರಿಕೆ ಹಾಕಿದ ಘಟನೆ ನಡೆದಿದೆ.

ಬಿಜೆಪಿಯ ಮಾಲ್ತಿ ಕಿಶೋರ್ ಮಹೇಶ್ವರಿ ಅವರಿಗಿಂತ 12,000 ಕ್ಕೂ ಹೆಚ್ಚು ಮತಗಳಿಂದ ಹಿಂದುಳಿದಿದ್ದ ಸೋಲಂಕಿ, ಕೆಲವು ಇವಿಎಂಗಳನ್ನು ಸರಿಯಾಗಿ ಸೀಲ್ ಮಾಡಿಲ್ಲ ಎಂದು ಆರೋಪಿಸಿದ್ದರು.

ಅಸಮಾಧಾನಗೊಂಡ ಸೋಲಂಕಿ ನಂತರ ಎಣಿಕೆ ಕೊಠಡಿಯಲ್ಲಿ ಇವಿಎಂ ಟ್ಯಾಂಪರಿಂಗ್ ಆರೋಪ ಮಾಡುತ್ತಾ ಧರಣಿ ಕುಳಿತರು. ಬಳಿಕ ಅವರು ಕೊರಳಿಗೆ ಬಟ್ಟೆಯ ಕುಣಿಕೆಯನ್ನು ಕಟ್ಟಿಕೊಂಡು ಆಕ್ರೋಶ ಹೊರಹಾಕಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...