ಬೆಂಗಳೂರು: ವಿವಿಧ ಕಾರಣಗಳಿಗಾಗಿ ತೆರವಾದ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ ಉಪಚುನಾವಣೆ ಘೋಷಣೆ ಮಾಡಿದೆ. ನವೆಂಬರ್ 23ರಂದು ಚುನಾವಣೆ ನಡೆಯಲಿದೆ.
ರಾಜ್ಯದ 195 ತಾಲೂಕಿನ 531 ಗ್ರಾಮ ಪಂಚಾಯಿತಿಗಳ ಒಟ್ಟು 641 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನವೆಂಬರ್ 6ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದ್ದು, ನವೆಂಬರ್ 12 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನವೆಂಬರ್ 13ರಂದು ನಾಮಪತ್ರಗಳ ಪರಿಶೀಲನೆ, ನವೆಂಬರ್ 15 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದೆ. ನವೆಂಬರ್ 23 ರಂದು ಚುನಾವಣೆ ನಡೆಯಲಿದ್ದು, ಮರು ಮತದಾನ ಅವಶ್ಯಕವಿದ್ದರೆ ನವೆಂಬರ್ 25 ರಂದು ನಡೆಸಲಾಗುವುದು. ನವೆಂಬರ್ 26ರಂದು ಮತ ಎಣಿಕೆ ನಡೆಸಲಾಗುವುದು.
ಅದೇ ರೀತಿ ರಾಜ್ಯದಲ್ಲಿ ತೆರವಾಗಿರುವ ನಗರ ಸ್ಥಳೀಯ ಸಂಸ್ಥೆಗಳಿಗೂ ಉಪಚುನಾವಣೆ ಪ್ರಕಟಿಸಲಾಗಿದ್ದು, 43 ನಗರ ಸಂಸ್ಥೆಗಳಿಗೆ ನವೆಂಬರ್ 4ರಂದು ಉಪಚುನಾವಣೆಯ ಅಧಿಸೂಚನೆ ಪ್ರಕಟವಾಗಲಿದೆ. ನವೆಂಬರ್ 11 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ನವೆಂಬರ್ 12ರಂದು ನಾಮಪತ್ರಗಳ ಪರಿಶೀಲನೆ, ನವೆಂಬರ್ 14 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ನವೆಂಬರ್ 23 ರಂದು ಮತದಾನ ನಡೆಯಲಿದ್ದು, ಅಗತ್ಯವಿದ್ದಲ್ಲಿ ನವೆಂಬರ್ 25 ರಂದು ಮರು ಮತದಾನ, ನವೆಂಬರ್ 26ರಂದು ಮತ ಎಣಿಕೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.