ಬೆಂಗಳೂರು: ಮಾರ್ಚ್ 29, ಏಪ್ರಿಲ್ 4 ಇಲ್ಲವೇ 8 ರಂದು ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
2018ರಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಮಾರ್ಚ್ 27ರಂದು ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿ ನೀತಿ ಸಂಹಿತೆ ಜಾರಿಗೊಳಿಸಿತ್ತು. ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಇತ್ತೀಚೆಗೆ ಬರೆದ ಪತ್ರದಲ್ಲಿ ಯಾವುದೇ ಕ್ಷಣದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದ್ದು, ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಇಂದು, ನಾಳೆಯೊಳಗೆ ಚುನಾವಣೆ ಘೋಷಣೆಯಾಗಬಹುದೆಂದು ಹೇಳಲಾಗಿದೆ.
ವೇಳಾಪಟ್ಟಿ ಪ್ರಕಟಣೆ ತಡವಾದರೂ ಕೂಡ ಅಧಿಸೂಚನೆ ಪ್ರಕಟ, ಮತದಾನ, ಮತ ಎಣಿಕೆ ನಿಗದಿತ ದಿನಗಳಂದೇ ನಡೆಸಲು ಚುನಾವಣಾ ಆಯೋಗ ಸಿದ್ದತೆ ಕೈಗೊಂಡಿದೆ. 2018ರಲ್ಲಿ ಮೇ 12ರಂದು ಮತದಾನ ನಡೆದಿತ್ತು. ಚುನಾವಣೆ ಅಧಿಸೂಚನೆ ಪ್ರಕಟವಾದ ನಂತರ 25 ದಿನಗಳಲ್ಲಿ ಮತದಾನ ಪ್ರಕ್ರಿಯೆ ನಡೆದಲ್ಲಿ ಮೇ 12ರಂದು ಮತದಾನ, ಮೇ 15 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಈ ವಾರ ಇಲ್ಲವೇ ಏಪ್ರಿಲ್ ಮೊದಲವಾರ ಚುನಾವಣೆ ಘೋಷಣೆಯಾಗಲಿದೆ ಎಂದು ಹೇಳಲಾಗಿದೆ.