
ರಾಮನಗರ: ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಗಿಫ್ಟ್ ನೀಡಿದ್ದ ಕುಕ್ಕರ್ ಸಿಡಿದು ಬಾಲಕಿ ಗಾಯಗೊಂಡ ಘಟನೆ ರಾಮನಗರ ತಾಲೂಕಿನ ಕೂನಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಹಾಲಕ್ಷ್ಮಿ(17) ಗಾಯಗೊಂಡ ಬಾಲಕಿ. ಶುಕ್ರವಾರ ಅಡುಗೆ ಮಾಡುವ ವೇಳೆ ಕುಕ್ಕರ್ ಸಿಡಿದು ಮಹಾಲಕ್ಷ್ಮಿ ಮುಖಕ್ಕೆ ಗಾಯಗಳಾಗಿವೆ. ಆಕೆಯನ್ನು ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ಅವರ ಬೆಂಬಲಿಗರು ಮತದಾರರಿಗೆ ಹಂಚಿದ್ದ ಕುಕ್ಕರ್ ಇದಾಗಿದೆ ಎಂದು ಹೇಳಲಾಗಿದೆ.
ಕುಕ್ಕರ್ ಸಿಡಿದು ಬಾಲಕಿ ಗಾಯಗೊಂಡ ನಂತರ ಚುನಾವಣೆ ವೇಳೆ ಹಂಚಿಕೆ ಮಾಡಿದ್ದ ಕುಕ್ಕರ್ ಗಳನ್ನು ಗ್ರಾಮಸ್ಥರು ರಸ್ತೆಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.