
ನವದೆಹಲಿ: ಲೋಕಸಭೆ ಚುನಾವಣೆಗೆ ಮುನ್ನ ಐದು ರಾಜ್ಯಗಳಾದ ಅಸ್ಸಾಂ, ಬಿಹಾರ, ಒಡಿಶಾ, ಜಾರ್ಖಂಡ್ ಮತ್ತು ಆಂಧ್ರಪ್ರದೇಶದಲ್ಲಿ 8 ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು 12 ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಂಗಳವಾರ ಭಾರತೀಯ ಚುನಾವಣಾ ಆಯೋಗ(ಇಸಿಐ) ವರ್ಗಾವಣೆ ಆದೇಶ ಹೊರಡಿಸಿದೆ.
ಚುನಾವಣಾ ಆಯೋಗದ ಪ್ರಕಾರ, ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರೊಂದಿಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಆಯೋಗವು “ನಿಯಮಿತ ಪರಿಶೀಲನೆ” ಯ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವರ್ಗಾವಣೆಗೊಂಡ ಅಧಿಕಾರಿಗಳ ವಿವರ
ಅಸ್ಸಾಂ: ಉದಲಗಿರಿಯ ಡಿಎಂ
ಬಿಹಾರ: ಭೋಜ್‌ಪುರ ಜಿಲ್ಲೆಯ ಡಿಎಂ ಮತ್ತು ಎಸ್‌ಪಿ, ನವಾಡ ಜಿಲ್ಲೆಯ ಡಿಎಂ ಮತ್ತು ಎಸ್‌ಪಿ
ಜಾರ್ಖಂಡ್: ಎಸ್ಪಿ(ಗ್ರಾಮೀಣ) ರಾಂಚಿ, ಡಿಐಜಿ ಪಲಾಮು, ಐಜಿ ದುಮ್ಕಾ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಅಧಿಕಾರಿಗಳ ಸಮಿತಿಯನ್ನು ಕಳುಹಿಸಲು ಎಸ್ಪಿ ದಿಯೋಘರ್ ಅವರಿಗೆ ನಿರ್ದೇಶನ ನೀಡಲಾಗಿದೆ.
ಒಡಿಶಾ: ಕಟಕ್ ಮತ್ತು ಜಗತ್‌ಸಿಂಗ್‌ಪುರದ ಡಿಎಂ, ಅಂಗುಲ್, ಬೆಹ್ರಾಂಪುರ, ಖುರ್ದಾ, ರೂರ್ಕೆಲಾ ಎಸ್‌ಪಿ, ಡಿಸಿಪಿ ಕಟಕ್ ಇಟ್ ಐಜಿ ಸೆಂಟ್ರಲ್
ಆಂಧ್ರಪ್ರದೇಶ: ಕೃಷ್ಣ, ಅನಂತಪುರಮು, ತಿರುಪತಿ ಜಿಲ್ಲೆಗಳ ಡಿಎಂ, ಪ್ರಕಾಶಂ, ಪಲ್ನಾಡು, ಚಿತ್ತೂರು, ಅನಂತಪುರಮು, ನೆಲ್ಲೂರು ಜಿಲ್ಲೆಗಳ ಎಸ್ಪಿ, ಗುಂಟೂರು ರೇಂಜ್‌ನ ಐಜಿಪಿ.
ಎಲ್ಲಾ ವರ್ಗಾವಣೆಗೊಂಡ ಅಧಿಕಾರಿಗಳು ತಕ್ಷಣ ತಮ್ಮ ಕಿರಿಯ ಅಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಬೇಕಿದೆ. ಲೋಕಸಭೆ ಚುನಾವಣೆ ಮುಗಿಯುವವರೆಗೆ ಯಾವುದೇ ಚುನಾವಣಾ ಜವಾಬ್ದಾರಿಯನ್ನು ಹೊಂದಿರುವಂತಿಲ್ಲ. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಆಯೋಗಕ್ಕೆ ಕಳುಹಿಸುವಂತೆ ಆಯಾ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದ್ದು, ವರ್ಗಾವಣೆಗೊಂಡವರ ಬದಲಿಗೆ ಶಾರ್ಟ್‌ಲಿಸ್ಟ್ ಮಾಡಿದವರನ್ನು ನೇಮಿಸಲಾಗುವುದು.