ನವದೆಹಲಿ: 5 ರಾಜ್ಯಗಳ ವಿಧಾನಸಭೆಗೆ ದಿನಾಂಕ ಘೋಷಣೆಯಾಗಿದ್ದು, ಇಂದು ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಮುಗಿದಿದೆ.
ಚುನಾವಣಾ ಆಯೋಗ ಮಣಿಪುರ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಪರಿಷ್ಕರಿಸಿದೆ. ಮೊದಲ ಹಂತದ ಚುನಾವಣೆಗೆ ಫೆ.27 ರ ಬದಲಾಗಿ ಫೆ.28ರಂದು ಮತದಾನ ನಡೆಯಲಿದೆ. ಎರಡನೇ ಹಂತದ ಮತದಾನ ಮಾರ್ಚ್ 3ರ ಬದಲು ಮಾರ್ಚ್ 5ರಂದು ನಡೆಯಲಿದೆ.
ಈ ಹಿಂದೆ ಪಂಜಾಬ್ ನಲ್ಲಿಯೂ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಪರಿಷ್ಕರಣೆ ಮಾಡಿತ್ತು.