ನವದೆಹಲಿ : ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಮತ್ತು ದೆಹಲಿ ಸಚಿವೆ ಅತಿಶಿ ಅವರಿಗೆ ಚುನಾವಣಾ ಆಯೋಗ (ಇಸಿ) ಶೋಕಾಸ್ ನೋಟಿಸ್ ನೀಡಿದೆ.
ನೋಟಿಸ್ ನಲ್ಲಿ ಅತಿಶಿ ತನ್ನ ಆರೋಪಗಳನ್ನು ದೃಢವಾದ ಪುರಾವೆಗಳೊಂದಿಗೆ ಸಾಬೀತುಪಡಿಸಬೇಕೆಂದು ಚುನಾವಣಾ ಆಯೋಗ ಒತ್ತಾಯಿಸಿದೆ.
ತನಗೆ ಮತ್ತು ಇತರ ಮೂವರು ಎಎಪಿ ನಾಯಕರಾದ ಸೌರಭ್ ಭಾರದ್ವಾಜ್, ರಾಘವ್ ಚಡ್ಡಾ ಮತ್ತು ದುರ್ಗೇಶ್ ಪಾಠಕ್ ಅವರಿಗೆ ಬಿಜೆಪಿಗೆ ಸೇರಲು ಸಲಹೆ ನೀಡಲಾಗಿದೆ ಅಥವಾ ಒಂದು ತಿಂಗಳಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿಸಲು ಸಿದ್ಧರಾಗಿರಿ ಎಂದು ಅತಿಶಿ ಹೇಳಿದ್ದರು.
ಲೋಕಸಭಾ ಚುನಾವಣೆಗೆ ಎರಡು ತಿಂಗಳ ಮೊದಲು ಮುಂದಿನ ಎರಡು ತಿಂಗಳಲ್ಲಿ ಇನ್ನೂ ನಾಲ್ವರು ಎಎಪಿ ನಾಯಕರಾದ ಸೌರಭ್ ಭಾರದ್ವಾಜ್, ಅತಿಶಿ, ದುರ್ಗೇಶ್ ಪಾಠಕ್ ಮತ್ತು ರಾಘವ್ ಚಡ್ಡಾ ಅವರನ್ನು ಬಂಧಿಸಲಾಗುವುದು ಎಂದು ದೆಹಲಿ ಸಚಿವೆ ಮತ್ತು ಎಎಪಿ ನಾಯಕಿ ಅತಿಶಿ ಹೇಳಿದ್ದರು. ನನ್ನ ಆಪ್ತರೊಬ್ಬರ ಮೂಲಕ ನನ್ನ ರಾಜಕೀಯ ಜೀವನವನ್ನು ಉಳಿಸಲು ಅವರ ಪಕ್ಷಕ್ಕೆ ಸೇರಲು ಬಿಜೆಪಿ ನನ್ನನ್ನು ಸಂಪರ್ಕಿಸಿತು ಮತ್ತು ನಾನು ಬಿಜೆಪಿಗೆ ಸೇರದಿದ್ದರೆ ಮುಂದಿನ ಒಂದು ತಿಂಗಳಲ್ಲಿ ನನ್ನನ್ನು ಇಡಿ ಬಂಧಿಸುತ್ತದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.