ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.
ಮತದಾನ ಕೇಂದ್ರಗಳಲ್ಲಿ ಪೋಟೋ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಚುನಾವಣಾ ಆಯೋಗ ಮೊಬೈಲ್ ನಿಷೇಧಿಸಿದೆ. ಚುನಾವಣಾ ಸಿಬ್ಬಂದಿ ಕೂಡ ತಮ್ಮ ಮೊಬೈಲ್ ಬಳಸುವಂತಿಲ್ಲ.
ಮತಗಟ್ಟೆಗಳಲ್ಲಿ ಕೆಲವರು ಫೋಟೋ, ಸೆಲ್ಫಿ ತೆಗೆದುಕೊಳ್ಳುತ್ತಾರೆ. ಇದರಿಂದ ಮತದಾನ ಪ್ರಕ್ರಿಯೆ ವಿಳಂಬವಾಗುತ್ತದೆ. ಬೇರೆಯವರಿಗೆ ತೊಂದರೆಯಾಗುತ್ತದೆ. ಅಲ್ಲದೇ ಮತದಾನ ಗೌಪ್ಯವಾಗಿರಬೇಕು ಎಂಬುದು ತಿಳಿದಿದ್ದರೂ ಕೆಲವರು ಅದರ ಫೋಟೋ ತೆಗೆದು ಜಾಲತಾಣಗಳಲ್ಲಿ ಹಾಕುತ್ತರೆ. ಇದು ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ. ಈ ಕಾರಣಕ್ಕೆ ಮತಗಟ್ಟೆಗಳಿಗೆ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ.
ಚುನಾವಣೆ ಸಿಬ್ಬಂದಿ ಕೂಡ ತಮ್ಮ ಮೊಬೈಲ್ ಗಳನ್ನು ಬಳಕೆ ಮಾಡುವಂತಿಲ್ಲ. ಬೂತ್ ಮಟ್ಟದ ಚುನಾವಣಾಧಿಕಾರಿ ಬಳಿ ಮೊಬೈಲ್ ಗಳನ್ನು ಸಂಗ್ರಹಿಸಿ ಇಡಲಾಗುವುದು. ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಮೊಬೈಲ್ ಬಳಕೆಗೆ ಅನುವು ಮಾಡಿಕೊಡಲಾಗುವುದು ಎಂದು ಹೇಳಲಾಗಿದೆ.