ಚುನಾವಣಾ ಆಯೋಗವು ಗುರುವಾರ ಟಿಆರ್‌ಎಸ್ ಅಧ್ಯಕ್ಷ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪಕ್ಷದ ಹೆಸರನ್ನು ತೆಲಂಗಾಣ ರಾಷ್ಟ್ರ ಸಮಿತಿ ಬದಲು ಭಾರತ ರಾಷ್ಟ್ರ ಸಮಿತಿ ಎಂದು ಬದಲಾಯಿಸಲು ಒಪ್ಪಿಕೊಂಡಿದೆ.
ಟಿಆರ್‌ಎಸ್‌ಗೆ ಬರೆದ ಪತ್ರದಲ್ಲಿ, ಹೆಸರು ಬದಲಾವಣೆಯನ್ನು ಸ್ವೀಕರಿಸಲು ಪಕ್ಷದ ವಿನಂತಿಯನ್ನು ಉಲ್ಲೇಖಿಸಿದ್ದು, ಪಕ್ಷದ ಹೆಸರನ್ನು ತೆಲಂಗಾಣ ರಾಷ್ಟ್ರ ಸಮಿತಿಯಿಂದ ಭಾರತ ರಾಷ್ಟ್ರ ಸಮಿತಿಗೆ ಬದಲಾಯಿಸಲು ಒಪ್ಪಿರುವುದಾಗಿ ಹೇಳಿದ್ದು, ಈ ಸಂಬಂಧ ಅಗತ್ಯ ಅಧಿಸೂಚನೆಯನ್ನು ಸೂಕ್ತ ಸಮಯದಲ್ಲಿ ಹೊರಡಿಸಲಾಗುವುದು ಎಂದು ಹೇಳಲಾಗಿದೆ.
ಚುನಾವಣಾ ಆಯೋಗದ ಪತ್ರವನ್ನು ಕೆಸಿಆರ್ ಅವರ ಕಚೇರಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್ ಅಕ್ಟೋಬರ್ 5 ರಂದು ತನ್ನ ಹೆಸರನ್ನು ‘ಬಿಆರ್‌ಎಸ್’ ಎಂದು ಬದಲಾಯಿಸಿ ‘ರಾಷ್ಟ್ರೀಯ ರಾಜಕಾರಣ’ಕ್ಕೆ ನಾಂದಿ ಹಾಡಿತು.