ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯುತ್ತಿದೆ, ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ 88 ಕೋಟಿ ರೂ. ನಗದು, 75 ಕೋಟಿ ರೂಪಾಯಿ ಮೌಲ್ಯದ 147 ಕೆಜಿ ಚಿನ್ನ ಸೇರಿದಂತೆ ಇದುವರೆಗೆ 265 ಕೋಟಿ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ.
ಚುನಾವಣೆ ನೀತಿ ಸಮಿತಿ ಜಾರಿಯಾದ ನಂತರ ಚುನಾವಣಾ ಜಾಗೃತ ದಳ, ಪೊಲೀಸರು, ಅಬಕಾರಿ ಹಾಗೂ ಆದಾಯ ತೆರಿಗೆ ಅಧಿಕಾರಿಗಳು, ಸ್ಥಿರ ತಪಾಸಣಾ ತಂಡ ಇದುವರೆಗೆ 26.62 ಕೋಟಿ ರೂ. ಮೌಲ್ಯದ ಉಡುಗೊರೆಗಳು 4.32 ಕೋಟಿ ರೂಪಾಯಿ ಮೌಲ್ಯದ 615 ಕೆಜಿ ಬೆಳ್ಳಿ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
17 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯ, 60 ಕೋಟಿ ರೂಪಾಯಿ ಮೌಲ್ಯದ 15.73 ಲಕ್ಷ ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ. ಚುನಾವಣೆ ಅಕ್ರಮಕ್ಕೆ ಸಂಬಂಧಿಸಿದಂತೆ 2036 ಪ್ರಕರಣ ದಾಖಲಿಸಲಾಗಿವೆ.