ತಾಯಿ ಹೃದಯದಲ್ಲಿ ಎಲ್ಲರಿಗೂ ಮಮತೆಯ ಬೆಚ್ಚನೆಯ ಆಶ್ರಯವಿದೆ. ಹಾಗಾಗಿಯೇ ಮಹಿಳೆಗೆ ಸಮಾಜದಲ್ಲಿ ಗೌರವಯುತ ಸ್ಥಾನವಿದೆ. ತನ್ನ ಮಕ್ಕಳಾದರೂ ಸರಿಯೇ, ಬೇರೆಯವರ ಮಕ್ಕಳಾದರೂ ಸರಿಯೇ ’ಅಮ್ಮಾ ಹಸಿವು’ ಎಂದ ಕೂಡಲೇ ಮಾತೃ ಹೃದಯ ಕರಗುತ್ತದೆ.
ಆಕೆ ಇರುವುದರಲ್ಲೇ ಅಚ್ಚುಕಟ್ಟಾಗಿ ಕೈತುತ್ತು ರೆಡಿ ಮಾಡಿ, ಬಾಯಿಗೆ ಇಡುತ್ತಾಳೆ. ಆದರೆ, ಕೇರಳದಲ್ಲಿ ಈ ಮದರ್ ಇಂಡಿಯಾ ಅವರು ಮನೆಗೆ ಬಂದ ಆನೆಗೆ ’ಬಾಯಿ ತುತ್ತು’ ಕೊಟ್ಟು ಮುದ್ದಾಡಿ ಹಸಿವು ನೀಗಿಸಿದ್ದಾರೆ!
ಕೇರಳದ ಪ್ರತಿ ಗ್ರಾಮದ ದೇವಸ್ಥಾನದಲ್ಲಿ ಒಂದು ಸಾಕು ಆನೆ ಇರುತ್ತದೆ. ಅದರ ಉಸ್ತುವಾರಿಗೆಂದೇ ಒಬ್ಬ ಮಾವುತ, ಔಷಧೋಪಚಾರಕ್ಕಾಗಿ ಊರಿನ ಮುಖಂಡರು ಇರುತ್ತಾರೆ.
ಬೆಳಗ್ಗೆದ್ದು ನದಿ, ಹರಿಯುವ ಜರಿಯಲ್ಲಿ ಸ್ನಾನ ಮುಗಿಸಿದ ಬಳಿಕ ಆನೆಯು ದೇವರಿಗೆ ನಮಿಸಿ ಊರಿನ ಪ್ರದಕ್ಷಿಣೆ ಹೊರಡುತ್ತದೆ. ಊರಿನ ಪ್ರತಿಯೊಬ್ಬರು ಕೂಡ ತಮ್ಮ ಮನೆಯ ಮಗು ಬಂದಿದೆ ಎಂಬಂತೆ, ಮನೆ ಬಾಗಿಲಿಗೆ ಬಂದ ಈ ಆನೆಗೆ ನೆಚ್ಚಿನ ಆಹಾರ ಪದಾರ್ಥಗಳನ್ನು ಉಣಬಡಿಸುತ್ತಾರೆ. ಅಂಥದ್ದೇ ‘ಬಾಯಿ ತುತ್ತು’ ಕೇರಳದಲ್ಲಿ ಆನೆಯೊಂದಕ್ಕೆ ಸಿಕ್ಕಿರುವ ಈ ವಿಡಿಯೊ ಭಾರಿ ವೈರಲ್ ಆಗಿದೆ. ಟ್ವಿಟರ್‌ನಲ್ಲಿ ‘Gannuprem’ ಹೆಸರಿನ ಖಾತೆಯಲ್ಲಿ ಈ ವಿಡಿಯೊ ಪೋಸ್ಟ್ ಆಗಿದೆ, ತಪ್ಪದೇ ನೋಡಿ.