ಕೆಲ ಹಿರಿಯ ಜೀವಗಳಿಗೆ ಅದ್ಯಾವ ಮಟ್ಟದಲ್ಲಿ ಜೀವನೋತ್ಸಾಹ ಇರುತ್ತದೆ ಎಂದರೆ ಕುಟುಂಬದ ಕಾರ್ಯಕ್ರಮಗಳಲ್ಲಿ ಅವರಷ್ಟು ಲವಲವಿಕೆಯಿಂದ ಭಾಗವಹಿಸಲು ತರುಣರಿಗೂ ಸಾಧ್ಯವಾದಷ್ಟು!
ಹಿರಿಯ ಮಹಿಳೆಯೊಬ್ಬರು ಸಮಾರಂಭವೊಂದರಲ್ಲಿ ಆಶಾ ಭೋಸ್ಲೇ ಹಾಡಿರುವ ’ಪಿಯಾ ತುಬ್ ಅಬ್ ತೋ ಆಜಾ’ ಹಾಡಿಗೆ ಮಸ್ತ್ ಸ್ಟೆಪ್ ಹಾಕುತ್ತಿರುವ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.
ಪೋಸ್ಟ್ ಮಾಡಿದ ಕೆಲವೇ ಗಂಟೆಗಳ ಒಳಗೆ ಈ ವಿಡಿಯೋಗೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಸಿಕ್ಕಿವೆ. ಸುತ್ತಲೂ ಇರುವ ಹೆಂಗಸರು ಈ ಹಿರಿಯಜ್ಜಿಯ ಉಲ್ಲಾಸಕ್ಕೆ ’ಹೋ..’ ಎಂದು ಕೂಗುತ್ತಾ ಪ್ರೋತ್ಸಾಹ ಕೊಡುತ್ತಿರುವುದನ್ನು ಸಹ ವಿಡಿಯೋದಲ್ಲಿ ನೋಡಬಹುದು.
ಅಜ್ಜಿಯ ಈ ನೃತ್ಯಕ್ಕೆ ಫಿದಾ ಆಗಿರುವ ನೆಟ್ಟಿಗರು, “ದಾದಿ ನಮಗೂ ನಿಮ್ಮ ಹಾಗೆ ಕುಣಿಯುವುದನ್ನು ಕಲಿಸುವಿರಾ?” ಎಂದು ಕಾಮೆಂಟ್‌ಗಳನ್ನು ಹಾಕಿದ್ದಾರೆ.