alex Certify ಲತಾ ಮಂಗೇಶ್ಕರ್ ಅವರ ಪ್ರಸಿದ್ಧ ಗೀತೆಗೆ ಲಿಪ್ ಸಿಂಕ್ ಮಾಡೋ ಮೂಲಕ ಮೋಡಿ ಮಾಡಿದ ವೃದ್ಧೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲತಾ ಮಂಗೇಶ್ಕರ್ ಅವರ ಪ್ರಸಿದ್ಧ ಗೀತೆಗೆ ಲಿಪ್ ಸಿಂಕ್ ಮಾಡೋ ಮೂಲಕ ಮೋಡಿ ಮಾಡಿದ ವೃದ್ಧೆ..!

Elderly Woman Lip-syncs Lata Mangeshkar's 'Jiska Mujhe Tha Intezar'ಪ್ರತಿಭೆಗೆ ಯಾವುದೇ ವಯಸ್ಸಿನ ಅಡ್ಡಿಯಿಲ್ಲ. ಅನೇಕ ಮಂದಿ ವೃದ್ಧರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವೃದ್ಧ ಮಹಿಳೆಯೊಬ್ಬರು ʼಜಿಸ್ಕಾ ಮುಜೆ ಥಾ ಇಂತೇಜಾರ್ʼ ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ.

ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಸಾವಿರಾರು ವೀಕ್ಷಣೆಗಳನ್ನು ಹೊಂದಿದೆ. ಉಷಾ ರಾಣಿ ಎಂದು ಗುರುತಿಸಲಾದ ವೃದ್ಧೆ, ಲತಾ ಮಂಗೇಶ್ಕರ್ ಅವರ ಈ ನಿತ್ಯಹರಿದ್ವರ್ಣ ಹಾಡಿಗೆ ಸಂಪೂರ್ಣವಾಗಿ ಲಿಪ್ ಸಿಂಕ್ ಮಾಡಿದ್ದಾರೆ.

ವಿಡಿಯೋದಲ್ಲಿ, ಉಷಾ ರಾಣಿ ಸಲ್ವಾರ್ ಸೂಟ್‌ನಲ್ಲಿ ಜಿಸ್ಕಾ ಮುಜೆ ಥಾ ಇಂತೇಜಾರ್ ಹಾಡಿಗೆ ಲಿಪ್ ಸಿಂಕ್ ಮಾಡುವುದನ್ನು ಕಾಣಬಹುದು. ಈ ಹಾಡು ಡಾನ್ ಚಿತ್ರದ್ದು. ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಜೀನತ್ ಅಮಾನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇನ್ನು ಹಾಡಿಗೆ ಲಿಪ್ ಸಿಂಕ್ ಮಾಡುತ್ತಿದ್ದಂತೆ ಉಷಾ ಮುಗ್ಧ ನಗೆ ಬೀರಿದ್ದಾರೆ.

ಉಷಾ ರಾಣಿ ಅವರು ಹಾಡಿಗೆ ಲಿಪ್ ಸಿಂಕ್ ಮಾಡಿರುವುದನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಅವರು ಜನಪ್ರಿಯ ಬಾಲಿವುಡ್ ಹಾಡುಗಳಿಗೆ ಆಗಾಗ್ಗೆ ಲಿಪ್ ಸಿಂಕ್ ಮಾಡುತ್ತಿರುತ್ತಾರೆ. ಅದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...