
ರಸ್ತೆಯಲ್ಲಿ, ನಾವು ಹಲವಾರು ವಿಭಿನ್ನ ರೀತಿಯ ವ್ಯಕ್ತಿಗಳನ್ನು ನೋಡುತ್ತಿರುತ್ತೇವೆ. ಕೆಲವೊಮ್ಮೆ ವಿಚಿತ್ರ ವ್ಯಕ್ತಿಗಳು ಕಾಣಸಿಗುತ್ತಾರೆ. ಇಂಥವರ ಪೈಕಿ ಕೆಲವರ ನಡವಳಿಕೆಗಳು ಮಿತಿಮೀರಿದ ಕಿರಿಕಿರಿಯನ್ನುಂಟು ಮಾಡುತ್ತದೆ ಅಥವಾ ಕೆಲವೊಮ್ಮೆ ಕೆಲವರ ವರ್ತನೆಗಳು ನಮ್ಮನ್ನು ರಂಜಿಸುತ್ತವೆ. ಅವರು ಚಾಲಕರು, ಸಂಚಾರಿ ಪೊಲೀಸರು ಅಥವಾ ಪಾದಚಾರಿಗಳು ಆಗಿರಬಹುದು. ಅಂಥ ಒಂದು ಕಿರಿಕಿರಿ ವ್ಯಕ್ತಿಯ ಜೊತೆ ನಡೆದ ವಿಚಿತ್ರ ಘಟನೆ ವಿಡಿಯೋ ವೈರಲ್ ಆಗಿದೆ.
ನೀವು ಸರಿಯಾಗಿ ಕಾರಿನ ಚಾಲನೆ ಮಾಡುತ್ತಿದ್ದರೂ ಯಾರಾದರೂ ಬಂದು ನಿಮ್ಮನ್ನು ಅಣಕಿಸಿದರೆ ಅಥವಾ ಬೈದರೆ ಹೇಗನ್ನಿಸಬೇಡ? ಅಂಥದ್ದೇ ಒಂದು ಘಟನೆಯ ವಿಡಿಯೋ ಇದಾಗಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಯಸ್ಸಾದ ವ್ಯಕ್ತಿ ತನ್ನ ನಾಯಿಯೊಂದಿಗೆ ರಸ್ತೆ ದಾಟಲು ಬಯಸುತ್ತಾನೆ. ಆ ಸಂದರ್ಭದಲ್ಲಿ ಆತ ಸಿಗ್ನಲ್ಗಾಗಿ ಕಾಯುವ ಬದಲು ಕಾರು ಚಾಲಕನನನ್ನು ನಿಲ್ಲಿಸಲು ಪ್ರಯತ್ನಿಸುತ್ತಾನೆ. ಜೀಬ್ರಾ ಕ್ರಾಸಿಂಗ್‌ನ ಮುಂದೆ ಕಾರನ್ನು ಈತ ನಿಲ್ಲಿಸುತ್ತಾನೆ.
ಕಾರಿನ ಚಾಲಕ ಮುಂದೆ ಬಂದಾಗ ವೃದ್ಧ ಆತನನ್ನು ಶಪಿಸುತ್ತಾನೆ. ಇಲ್ಲಿ ಕಾರಿನ ಚಾಲಕನದ್ದು ಯಾವುದೇ ತಪ್ಪು ಇಲ್ಲ, ಆದರೂ ವೃದ್ಧ ತಾನು ರಸ್ತೆ ದಾಟುವಾಗ ಆತ ನಿಲ್ಲಿಸಲಿಲ್ಲ ಎಂಬ ಸಿಟ್ಟಿನಲ್ಲಿ ಆತನತ್ತ ನೋಡುತ್ತಾ ಬೈಯುತ್ತಾ ಮುಂದೆ ಸಾಗುತ್ತಾನೆ.
ಆದರೆ ಎದುರುಗಡೆ ಲೈಟಿನ ಕಂಬ ಇರುವುದನ್ನು ಆತ ಗಮನಿಸುವುದಿಲ್ಲ. ಚಾಲಕನಿಗೆ ಬೈಯುವ ಭರದಲ್ಲಿ ಕಂಬಕ್ಕೆ ಹೋಗಿ ಗುದ್ದಿಸಿಕೊಳ್ಳುತ್ತಾನೆ. ಇದರ ವಿಡಿಯೋ ನೋಡಿ ನೆಟ್ಟಿಗರು ನಗುತ್ತಿದ್ದಾರೆ. ಕರ್ಮ ರಿಟರ್ನ್ಸ್ ಎನ್ನುತ್ತಿದ್ದಾರೆ.
https://twitter.com/Outofcon8ext/status/1623329972705435649?ref_src=twsrc%5Etfw%7Ctwcamp%5Etweetembed%7C