
ಮುಸ್ಲಿಂ ಸಮುದಾಯದ ವೃದ್ಧರಾಗಿರುವ ಇವರ ನೆಚ್ಚಿನ ಗೀತೆ ಇದಾಗಿದೆ ಅನಿಸುತ್ತದೆ. ಲಯಬದ್ಧವಾಗಿ ಖುಷಿಯಿಂದ ಸಂಭ್ರಮಿಸಿ ಹಾಡುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಹಾಗೆಯೇ ಅವರನ್ನು ಸುತ್ತುವರಿದ ಜನರ ನಡುವೆ, ತಮ್ಮ ಕುಟುಂಬಸ್ಥರ ಎದುರು ಧಾರಾವಾಹಿಯ ಆ ಟೈಟಲ್ ಸಾಂಗ್ ಹಾಡಿ ರಂಜಿಸಿದ್ದಾರೆ.
ಈ ವಿಡಿಯೊವನ್ನು ಭಾರತ ಚುನಾವಣಾ ಆಯೋಗದ ಮಾಜಿ ಆಯುಕ್ತರಾದ ಡಾ. ಎಸ್.ವೈ. ಖುರೇಷಿ ಅವರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಭಾರತೀಯ ನೌಕಾಪಡೆಯ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ
‘ಎಲ್ಲ ಕಟ್ಟುಪಾಡುಗಳು, ಸಂಪ್ರದಾಯಗಳನ್ನು ಮುರಿಯುವುದು ಎಂದರೆ ಇದೇನಾ !’ ಎಂದು ಖುರೇಷಿ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಭಾರತದ ಸಂಸ್ಕೃತಿ ವೈವಿಧ್ಯತೆ, ಕೋಮುಸೌಹಾರ್ದತೆಗೆ ನಿದರ್ಶನದಂತೆ ಇರುವ ಈ ವಿಡಿಯೋವನ್ನು ಹಲವಾರು ಮಂದಿ ಹಂಚಿಕೊಂಡು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ ಕೂಡ.
ದೂರದರ್ಶನದಲ್ಲಿ ಪ್ರಸಾರವಾಗಿ ಜನಪ್ರಿಯಗೊಂಡ ’ಮಹಾಭಾರತ’ ಧಾರಾವಾಹಿಯ ಈ ಟೈಟಲ್ ಗೀತೆಯನ್ನು ಹಾಡಿದವರು ಮಹೇಂದ್ರ ಕಪೂರ್. ಇದನ್ನು ಸಂಯೋಜನೆ ಮಾಡಿದವರು ರಾಜ್‌ಕಮಲ್. ಭಗವದ್ಗೀತೆಯ ಪ್ರಮುಖವಾದ ಎರಡು ಶ್ಲೋಕಗಳನ್ನು ಹಾಡಿನಲ್ಲಿ ಬಳಸಲಾಗಿದೆ. ಒಟ್ಟು 94 ಸಂಚಿಕೆಗಳ ಧಾರಾವಾಹಿಯನ್ನು 1988ರ ಅ.2 ರಂದು ಮೊದಲ ಬಾರಿಗೆ ಪ್ರಸಾರ ಮಾಡಲಾಯಿತು.