alex Certify ಮದುಮಗಳಂತೆ ಅಜ್ಜಿಯ ಶೃಂಗಾರ: ಪತ್ನಿಯನ್ನು ನೋಡಿ ಭಾವುಕನಾದ ಪತಿ-ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುಮಗಳಂತೆ ಅಜ್ಜಿಯ ಶೃಂಗಾರ: ಪತ್ನಿಯನ್ನು ನೋಡಿ ಭಾವುಕನಾದ ಪತಿ-ವಿಡಿಯೋ ವೈರಲ್

ಮದುಮಕ್ಕಳಂತೆ ಶೃಂಗಾರ ಮಾಡಿಕೊಳ್ಳುವ ಆಸೆ ಬಹುತೇಕ ಎಲ್ಲರಿಗೂ ಇರುತ್ತದೆ. ಈ ಯೌವನದ ದಿನಗಳನ್ನು ನೆನಪಿಸಿಕೊಂಡು ವೃದ್ಧಾಪ್ಯದಲ್ಲಿಯೂ ಕೆಲವರು ಈ ಆಸೆಯನ್ನು ಮತ್ತೊಮ್ಮೆ ಈಡೇರಿಸಿಕೊಂಡರೆ, ಇನ್ನು ಕೆಲವು ಕುಟುಂಬಗಳಲ್ಲಿ ಮಕ್ಕಳು ಇಲ್ಲವೇ ಮೊಮ್ಮಕ್ಕಳು ಸೇರಿ ಹಿರಿಯರನ್ನು ಮದುಮಕ್ಕಳಂತೆ ಶೃಂಗರಿಸಿ ಖುಷಿ ಪಡುವುದು ಇದೆ.

ಇಂಥದ್ದೇ ಒಂದು ಹೃದಯಸ್ಪರ್ಷಿ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ವೃದ್ಧೆಯೊಬ್ಬಳನ್ನು ಆಕೆಯ ಮಕ್ಕಳು, ಮೊಮ್ಮಕ್ಕಳು ಸೇರಿ ಮದುಮಗಳಂತೆ ಶೃಂಗಾರ ಮಾಡಿದ್ದಾರೆ. ನಂತರ ಪತಿಗೆ ಈ ಕುರಿತು ಸರ್​ಪ್ರೈಸ್​ ನೀಡಿದ್ದಾರೆ. ಅಡುಗೆ ಮನೆ ಸಮೀಪದ ಸೋಫಾದಲ್ಲಿ ವೃದ್ಧೆಯನ್ನು ಕುಳ್ಳರಿಸಿ ನಂತರ ಆಕೆಯ ಪತಿಯನ್ನು ಮಕ್ಕಳು ಅಲ್ಲಿಗೆ ಕರೆತರುತ್ತಾರೆ.

ಪತ್ನಿಯನ್ನು ನೋಡಿದ ವೃದ್ಧ ಆನಂದದಿಂದ ಕುಣಿದಾಡುವಂತೆ ಭಾವುಕರಾಗುವುದನ್ನು ವಿಡಿಯೋದಲ್ಲಿ ನೋಡಬಹುದು. ಪತಿ ದಶಕಗಳ ಹಿಂದೆ ಸರಿದು ಆ ದಿನಗಳನ್ನು ನೆನಪಿಸಿಕೊಳ್ಳುವಂತೆ ಭಾಸವಾದರೆ, ಪತಿಯನ್ನು ನೋಡಿ ವೃದ್ಧೆ ನಾಚುತ್ತಿರುವುದನ್ನೂ ಇದರಲ್ಲಿ ನೋಡಬಹುದಾಗಿದೆ. ಮನೆಯಲ್ಲಿ ಹಿರಿಯರಿದ್ದರೆ ಇಂಥ ಸಣ್ಣಪುಟ್ಟ ಸಂತೋಷವನ್ನು ಅವರಿಗೆ ನೀಡಬೇಕಿದೆ ಎಂದು ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...