ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದರಲ್ಲಿ ಕೆಲವು ನಿಮ್ಮನ್ನು ಅಳುವಂತೆ ಮಾಡುತ್ತದೆ. ಇದೀಗ ಇಂಥದ್ದೇ ಕಣ್ಣೀರಾಗುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಯಸ್ಸಾದಂತೆ ಗಂಡ-ಹೆಂಡತಿ ನಡುವೆ ಪ್ರೀತಿ ಹೆಚ್ಚಾಗುತ್ತದೆ ಎಂಬ ಮಾತಿನಂತೆ ವೃದ್ಧರೊಬ್ಬರು ತನ್ನ ದಿವಂಗತ ಪತ್ನಿಯ ಫೋಟೋ ಹಿಡಿದು ಸನ್ನೆ ಮಾಡಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಇದನ್ನು ಗುರ್ಪಿಂದರ್ ಸಂಧು ಎಂಬ ಬಳಕೆದಾರರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದುವರೆಗೆ ಈ ವಿಡಿಯೋ 2 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ.
ವೃದ್ಧ ವ್ಯಕ್ತಿಯೊಬ್ಬರು ರಸ್ತೆ ಬದಿಯ ಅಂಗಡಿಯಿಂದ ಶರಬತ್ ತೆಗೆದುಕೊಂಡಿದ್ದಾರೆ. ತನ್ನ ಸೈಕಲ್ ನಲ್ಲಿ ಕುಳಿತಿದ್ದ ಅವರು, ಮೊಬೈಲ್ ನಲ್ಲಿ ದಿವಂಗತ ಪತ್ನಿಯ ಫೋಟೋವನ್ನು ತೆರೆದಿದ್ದಾರೆ. ಶರಬತ್ ಕುಡಿಯುವ ಮೊದಲು, ಅವರು ಚಿತ್ರದ ಮೇಲೆ ಗ್ಲಾಸ್ ಇಟ್ಟು ತನ್ನ ಹೆಂಡತಿಗೆ ತೋರಿಸಿದ್ದಾರೆ. ನಂತರ ಅವರು ಶರಬತ್ ಕುಡಿದಿದ್ದಾರೆ. ಸಾಮಾಜಿಕ ಮಾಧ್ಯದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ವೃದ್ಧರ ಹಾವಭಾವ ಕಂಡು ಹಲವರು ಭಾವುಕರಾಗಿದ್ದಾರೆ.