ಶಸ್ತ್ರಸಜ್ಜಿತ ದರೋಡೆಕೋರನ ಮೇಲೆ ನುಗ್ಗಿದ ವೃದ್ಧರೊಬ್ಬರು ಕಿರಾಣಿ ಅಂಗಡಿಯ ಉದ್ಯೋಗಿಗಳನ್ನು ಕಾಪಾಡಿದ್ದಾರೆ. ಅಂಗಡಿಯ ಸಿಸಿ ಟಿವಿಯಲ್ಲಿ ಈ ದೃಶ್ಯ ದಾಖಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಬಂದೂಕು ಹಿಡಿದ ವ್ಯಕ್ತಿಯೊಬ್ಬರು ಮಳಿಗೆಗೆ ನುಗ್ಗಿ ಹಣ ನೀಡುವಂತೆ ಉದ್ಯೋಗಿಗಳಿಗೆ ಬೆದರಿಕೆ ಹಾಕುತ್ತಿರುವುದನ್ನು ಕಾಣಬಹುದು. ಕ್ಯಾಶ್ ಕೌಂಟರ್‌ನ ಕಡೆಗೆ ನುಗ್ಗಿದ ನಂತರ ಅಲ್ಲಿದ್ದ ವೃದ್ಧನ ಬಳಿ ಆತ ಬಂದೂಕು ಹಿಡಿದಿದ್ದಾನೆ. ಇದೇ ವೇಳೆ ಹಿಂದುಗಡೆಯಿಂದ ಮಹಿಳೆ ಬಂದಾಗ ಬಂದೂಕುಧಾರಿಯ ಗಮನ ಅತ್ತ ಹೋಗಿದೆ.
ಇದೇ ಸಂದರ್ಭ ಉಪಯೋಗಿಸಿಕೊಂಡ ವೃದ್ಧ ಬಂದೂಕುಧಾರಿಯ ಮೇಲೆ ನುಗ್ಗಿ ಅವನನ್ನು ಕೆಳಕ್ಕೆ ಬೀಳಿಸಿದ್ದಾನೆ. ನಂತರ ಅಲ್ಲಿ ನೆರೆಯವರು ಓಡೋಡಿ ಬಂದು ಬಂದೂಕುಧಾರಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
https://twitter.com/robberyfaiIs/status/1625827493461786625?ref_src=twsrc%5Etfw%7Ctwcamp%5Etweetembed%7Ctwterm%5E1625827493461786625%7Ctwgr%5E9078ef11ffdb306b11d7f0a4e11794f7c329d8cf%7Ctwcon%5Es1_&ref_url=https%3A%2F%2Fwww.news18.com%2Fbuzz%2Felderly-mans-faceoff-with-armed-thief-looks-straight-out-of-an-action-movie-7159267.html
https://twitter.com/robberyfaiIs/status/1625827493461786625?ref_src=twsrc%5Etfw%7Ctwcamp%5Etweetembed%7Ctwterm%5E
https://twitter.com/robberyfaiIs/status/1625827493461786625?ref_src=twsrc%5Etfw%7Ctwcamp%5Etweetembed%7Ctwterm%5E1626170253679157248%7Ctwgr%5E9078ef11ffdb306b11d7f0a4e11794f7c329d8cf%7Ctwcon%5Es2_&ref_url=https%3A%2F%2Fwww.news18.com%2Fbuzz%2Felderly-mans-faceoff-with-armed-thief-looks-straight-out-of-an-action-movie-7159267.html