ಹಿರಿಯ ವಯಸ್ಸಿನಲ್ಲೂ ಜೀವನೋತ್ಸಾಹವನ್ನು ಸ್ವಲ್ಪವೂ ಕಳೆದುಕೊಳ್ಳದೇ ಇನ್ನೂ ದುಡಿದು ಬದುಕಬೇಕೆಂಬ ಮನಸ್ಸಿರುವ ಅನೇಕ ಹಿರಿಯರನ್ನು ನಾವು ನೋಡಿರುತ್ತೇವೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಇಂಥದ್ದೇ ವ್ಯಕ್ತಿಯೊಬ್ಬರು ತಮ್ಮ 70ನೇ ವಯಸ್ಸಿನಲ್ಲಿ ಪೋಹಾ ಮಾರಿಕೊಂಡು ಜೀವನ ಸಾಗಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಅಭಿನವ್ ಜೆಸ್ವಾನಿ ಹೆಸರಿನ ಬ್ಲಾಗರ್ ಒಬ್ಬರು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಈ ವಿಡಿಯೋದಲ್ಲಿ, ತಮ್ಮ ಬೈಸಿಕಲ್ ಏರಿ, ಪೋಹಾ, ಚನಾ ಮತ್ತು ಚೀವ್ಡಾ ಮಾಡಲು ಬೇಕಾದ ಸಾಮಗ್ರಿಗಳಿರುವ ಬುಟ್ಟಿಯನ್ನು ಕಟ್ಟಿಕೊಂಡು, ಮೈಕ್ರೋಫೋನ್ ಮೂಲಕ ಘೋಷಣೆ ಮಾಡಿಕೊಂಡು ಸಾಗುವ ಈ ಜೀವನೋತ್ಸಾಹಿಯನ್ನು ನೋಡಬಹುದಾಗಿದೆ.
ಸ್ವರ್ಣ ಮಂದಿರದ ಪ್ರಾಂಗಣ ಅಪವಿತ್ರಗೊಳಿಸಲು ಮುಂದಾದ ಯುವಕನ ಹತ್ಯೆ
ಜಯಂತಿ ಭಾಯ್ ಹೆಸರಿನ ಈ ವ್ಯಕ್ತಿ ತಿಂಡಿಯನ್ನು ಸಿದ್ಧಪಡಿಸಿ, ಪತ್ರಿಕೆಯೊಂದರಲ್ಲಿ ಕಟ್ಟಿ ಹಸನ್ಮುಖಿಯಾಗಿ ಗ್ರಾಹಕರಿಗೆ ಮಾರುತ್ತಾರೆ. ನಗರದ ಇಟ್ವಾರಿ ಮತ್ತು ಗಾಂಧಿಬಾಗ್ ಪ್ರದೇಶದ ಬೀದಿಗಳಲ್ಲಿ ಈ ಕೆಲಸ ಮಾಡುವ ಜಯಂತಿ ಭಾಯ್, ತಮ್ಮ ವೈದ್ಯಕೀಯ ವೆಚ್ಚಗಳು ಹಾಗೂ ಮನೆ ಬಾಡಿಗೆ ದುಡ್ಡನ್ನು ಹೊಂದಿಸಲು ಈ ಕೆಲಸದಲ್ಲಿ ತೊಡಗಿದ್ದಾರೆ.