ಪರಿಶಿಷ್ಟ ವರ್ಗ ಸಮುದಾಯದ ಸಮಸ್ಯೆಗಳ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಸಮಾಲೋಚನೆ ನಡೆಸಲು ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯ ಬಿಜೆಪಿ ಕಾರ್ಯಕರ್ತರೊಬ್ಬರು ರಾಷ್ಟ್ರ ರಾಜಧಾನಿ ದೆಹಲಿಗೆ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ.
ಚೋಟೇಲಾಲ್ ಅಹಿರ್ವಾರ್ ಹೆಸರಿನ 63 ವರ್ಷದ ಇವರು ಎಸ್ಸಿ ಸಮುದಾಯದಲ್ಲಿನ ನಿರುದ್ಯೋಗದ ಸಮಸ್ಯೆಯನ್ನು ವಿವರಿಸಿ ಪ್ರಧಾನಿ ಮೋದಿಗೆ ಬೇಡಿಕೆ ಪತ್ರವೊಂದನ್ನು ಸಲ್ಲಿಸಿದ್ದಾರೆ. ತಮ್ಮ ಪ್ರದೇಶಕ್ಕೆ ಕೈಗಾರಿಕೆಗಳನ್ನು ತಂದು ಉದ್ಯೋಗ ಸೃಷ್ಟಿಸಲು ಪ್ರಧಾನಿಗೆ ಆಗ್ರಹಿಸಿದ್ದಾರೆ ಚೋಟೇಲಾಲ್.
ONLINE ವಂಚನೆಗೊಳಗಾಗಿ ಹಣ ಕಳೆದುಕೊಂಡಿದ್ದೀರಾ..? ಹಾಗಾದ್ರೆ ಮರಳಿ ಪಡೆಯಲು ಇಲ್ಲಿದೆ ಟಿಪ್ಸ್
ಬಿಜೆಪಿಯಲ್ಲಿ ಸೆಲೆಬ್ರಿಟಿಯಾಗಿರುವ ಚೋಟೇಲಾಲ್ ರನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿ.ಡಿ. ಶರ್ಮಾ ಭೇಟಿ ಮಾಡಿದ್ದಾರೆ.
ತಮ್ಮ ಊರು ದೇವೋರಿಯಿಂದ ಹೊರಟು 22 ದಿನಗಳ ಕಾಲ ನಡೆದು ಅಕ್ಟೋಬರ್ 11ರಂದು ದೆಹಲಿ ತಲುಪಿದ್ದಾರೆ ಚೋಟೇಲಾಲ್.
ಬಿರುಸುಗೊಂಡ ಬಣ ರಾಜಕೀಯ, ಶೀಘ್ರವೇ ಸಿಎಂಗೆ ಗೇಟ್ ಪಾಸ್..? ಛತ್ತೀಸ್ ಗಢದಲ್ಲಿ ಅಧಿಕಾರ ಹಂಚಿಕೆ ಸೂತ್ರದಂತೆ ರಾಜೀನಾಮೆ ನೀಡಲು ಸೋನಿಯಾ ಗಾಂಧಿ ಸೂಚನೆ
ಅಕ್ಟೋಬರ್ 14ರಂದು ಪ್ರಧಾನಿ ಮೋದಿರನ್ನು ಭೇಟಿ ಮಾಡಿದ ಆತ, ಮಾರನೇ ದಿನ ರೈಲೇರಿ ತಮ್ಮೂರಿಗೆ ಮರಳಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್, “ಚೋಟೇಲಾಲ್ ಬಗ್ಗೆ ತಿಳಿದ ನಾನು ಪ್ರಧಾನಿ ಭೇಟಿ ಮಾಡುವವರೆಗೂ ಅವರಿಗೆ ನಮ್ಮ ಮನೆಯಲ್ಲೇ ಉಳಿದುಕೊಳ್ಳಲು ಕೋರಿಕೊಂಡಿದ್ದೆ” ಎಂದಿದ್ದಾರೆ.
“ನನ್ನ ಆಲಿಂಗಿಸಿಕೊಂಡ ಪ್ರಧಾನಿ, ಬಡವರ ಕಲ್ಯಾಣಕ್ಕಾಗಿ ತಮ್ಮ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು,” ಎಂದು ಚೋಟೇಲಾಲ್ ತಿಳಿಸಿದ್ದಾರೆ.