ಮಧುರೈ-ದೆಹಲಿ ಇಂಡಿಗೋ ವಿಮಾನದಲ್ಲಿ ವೃದ್ಧರೊಬ್ಬರು ಅಸ್ವಸ್ಥಗೊಂಡು, ಇಂದೋರ್ ನಲ್ಲಿ ತುರ್ತು ಭೂಸ್ಪರ್ಶದ ನಂತರ ಸಾವನ್ನಪ್ಪಿದ್ದಾರೆ.
ಇಂಡಿಗೋ ಏರ್‌ಲೈನ್ಸ್ ಫ್ಲೈಟ್ 6E-2088 ಅನ್ನು ಶನಿವಾರ ಸಂಜೆ ವೈದ್ಯಕೀಯ ತುರ್ತುಸ್ಥಿತಿಯ ನಂತರ ಇಂದೋರ್ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು.
ಮೃತರನ್ನು ನೋಯ್ಡಾ ನಿವಾಸಿ 60 ವರ್ಷದ ಅತುಲ್ ಗುಪ್ತಾ ಎಂದು ಗುರುತಿಸಲಾಗಿದೆ. ಅವರನ್ನು ಇಂದೋರ್ ನ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ಪ್ರಯಾಣದ ಮಧ್ಯದಲ್ಲಿ ಗುಪ್ತಾ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಬಾಯಿಯಿಂದ ರಕ್ತಸ್ರಾವವಾಗಲು ಪ್ರಾರಂಭಿಸಿದೆ. ಅವರು ರಕ್ತದೊತ್ತಡ ಮತ್ತು ಮಧುಮೇಹ ಸೇರಿದಂತೆ ಕೆಲವು ಕಾಯಿಲೆಗಳಿಂದ ಬಳಲುತ್ತಿದ್ದರು. ಕೊನೆಗೆ ವಿಮಾನ ಜನವರಿ 14 ರಂದು ಸಂಜೆ 6:40 ರ ಸುಮಾರಿಗೆ ದೆಹಲಿಗೆ ಹೊರಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.