ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎಂಬ ಗಾದೆ ಇದೆ. ಅದೇ ರೀತಿ ಮಹಾನಗರಗಳಲ್ಲಿ ಮನೆ ಕಟ್ಟಿಕೊಂಡು ಜುಮ್ಮೆಂದು ಬೀಗುವ ಮಂದಿಯ ನಡುವೆ ಇಲ್ಲೊಬ್ಬ ಭೂಪ, ಮರಳುಗಾಡಿನ ನಡುವೆ ಮನೆ ಕಟ್ಟಿಕೊಂಡು ಕೂತಿದ್ದಾನೆ !
ಅಮೆರಿಕದ ಕ್ಯಾಲಿಫೊರ್ನಿಯಾದ ಮೊಜಾವಿ ಮರಳುಗಾಡಿನ ನಡುವಿನಲ್ಲಿ ಮನೆಯೊಂದು ನಿರ್ಮಾಣಗೊಂಡಿದೆ. ಅದರ ವಿನ್ಯಾಸ ಥೇಟ್ ಮಹಾನಗರದಲ್ಲಿನ ಅಪಾರ್ಟ್‌ವೊಂದರ ಐಷಾರಾಮಿ ರೂಮ್ ಇದ್ದಂತಿದೆ. ಇಂಥ ವಿಚಿತ್ರ, ವಿಶಿಷ್ಟ, ಅಪರೂಪದ ದುಸ್ಸಾಹಸಕ್ಕೆ ಕೈಹಾಕಿದ್ದು ಅರ್ಬನ್ ಆರ್ಕಿಟೆಕ್ಚರಲ್ ಸ್ಪೇಸ್ ಗ್ರೂಪ್ ಕಂಪನಿ. ಬಹಳ ಮುಖ್ಯ ಎಂದರೆ ಈ ಮನೆ ಮಾರಾಟವೂ ಆಗಿ ಹೋಗಿದೆ ! ಹೌದು, ಬರೋಬ್ಬರಿ 12 ಕೋಟಿ 80 ಲಕ್ಷ ರೂ.ಗಳಿಗೆ.
ಒಟ್ಟು ಐದು ಎಕರೆ ಪ್ರದೇಶದಲ್ಲಿ ಎಲ್ಲ ಐಷಾರಾಮಿ ಸೌಲಭ್ಯಗಳೊಂದಿಗೆ ಈ ಮಾಸ್ಟರ್‌ಪೀಸ್ ಮನೆಯನ್ನು ಕಟ್ಟುವುದು ಸುಲಭದ ಮಾತಾಗಿರಲಿಲ್ಲ. ಚರ್ಮ ಸುಟ್ಟುಹೋಗುವ ತಾಪಮಾನದಲ್ಲಿ ಕಾರ್ಮಿಕರನ್ನು ಕರೆತಂದು ಅವರಿಗೆ ರಕ್ಷಾ ಕವಚಗಳನ್ನು ತೊಡಿಸಿ, ಪೂರ್ಣ ಗಮನದಿಂದ ಕೆಲಸ ತೆಗೆಸುವುದು ದೊಡ್ಡ ಸಾಧನೆಯೇ ಆಗಿತ್ತು ಎನ್ನುತ್ತಾರೆ ನಿರ್ಮಾಣ ಕಂಪನಿಯ ಎಂಜಿನಿಯರ್.
SHOCKING: ಆಡುವಾಗಲೇ ಕಾದಿತ್ತು ದುರ್ವಿದಿ: ಅಡಿಕೆ ಬೇಯಿಸುವ ಹಂಡೆಗೆ ಬಿದ್ದು ಬಾಲಕ ಸಾವು
ಅಕ್ಕಪಕ್ಕದಲ್ಲಿ ನರಪಿಳ್ಳೆಯೂ ಕೂಡ ಇಲ್ಲದ ಈ ಒಂಟಿಮನೆಯಲ್ಲಿ ವಾಸ ಮಾಡುವಾತ ಖಡಾಖಂಡಿತಾಗಿ ವಾಹನ ಇರಿಸಿಕೊಳ್ಳಲೇಬೇಕು. ಯಾಕೆಂದರೆ , ಒಂದು ಪ್ಯಾಕೆಟ್ ಹಾಲಿಗೂ ಕೂಡ ಕಿಲೋಮೀಟರ್‌ಗಟ್ಟಲೆ ದೂರ ಬಿಸಿಲಿನಲ್ಲಿ ಸಂಚರಿಸಿ ಹೆಣಗಾಡಬೇಕು. ಹಾಗಾಗಿ ಇದು ಒಂದು ಅಥವಾ ಎರಡು ದಿನಗಳ ಏಕಾಂತ ವಾಸ ಅಥವಾ ಮೋಜಿಗೆ ಮಾತ್ರ ಮೀಸಲಾಗುವ ಸಾಧ್ಯತೆ ಹೆಚ್ಚಿದೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಮನೆಯ ಫೋಟೊ ನೋಡಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ ಇದರ ಹೆಸರು ’ಎಲ್ ಸಿಮೆಂಟೊ ಯುನೊ ಹೌಸ್’ ಅಂತ. ಇದರ ಬಗ್ಗೆ ವೆಬ್‌ಸೈಟ್ ಕೂಡ ಲಭ್ಯವಿದೆ. ಅದರ ಲಿಂಕ್ ಇಲ್ಲಿದೆ ನೋಡಿ, https://uncrate.com/el-cemento-uno-house/
https://www.instagram.com/p/CQ1kvaLDDBo/?utm_source=ig_web_copy_link