ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗುವಂತೆ ಗಳಿಕೆ ರಜೆ ನಗದೀಕರಣ ಆದೇಶ ಹೊರಡಿಸಲಾಗಿದೆ.
2021 ನೇ ಸಾಲಿಗೆ ಸಂಬಂಧಿಸಿದ ಗಳಿಕೆ ರಜೆ ನಗದೀಕರಣ ಮಾಡಿಕೊಳ್ಳಲು ಹಣಕಾಸು ಇಲಾಖೆ ವತಿಯಿಂದ ಅನುಮೋದನೆ ನೀಡಲಾಗಿದೆ. 15 ದಿನಗಳಿಗೆ ಮೀರದಂತೆ ರಜೆ ನಗದೀಕರಣ ಮಾಡಿಕೊಳ್ಳಬಹುದು. ಎಲ್ಲ ವೃಂದದ ನೌಕರರು 2021 ರ ಜನವರಿಯಿಂದ ಡಿಸೆಂಬರ್ ವರೆಗೆ ಅನ್ವಯವಾಗುವಂತೆ ಒಂದು ತಿಂಗಳ ಮೊದಲು ನೋಟಿಸ್ ನೀಡಿ ರಜೆ ನಗದೀಕರಣ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.