ಓ ಟಿ ಟಿ ಯಲ್ಲಿ ಪ್ರಸಾರವಾಗಿರುವ ‘ಎಕ್ಸ್ ಎಕ್ಸ್ ಎಕ್ಸ್’ ವೆಬ್ ಸರಣಿಯಲ್ಲಿ ಯೋಧರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ನಿರ್ಮಾಪಕಿ ಏಕ್ತಾ ಕಪೂರ್ ಅವರ ವಿರುದ್ಧ ವ್ಯಕ್ತಿ ಒಬ್ಬರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ಬಂಧನ ವಾರೆಂಟ್ ಹೊರಡಿಸಲಾಗಿದೆ.
ಹೀಗಾಗಿ ಇದನ್ನು ಪ್ರಶ್ನಿಸಿ ನಿರ್ಮಾಪಕಿ ಏಕ್ತಾ ಕಪೂರ್, ಸುಪ್ರೀಂ ಕೋರ್ಟ್ ಕದ ತಟ್ಟಿದ್ದು ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಹಾಗೂ ಸಿ.ಟಿ. ರವಿಕುಮಾರ್ ಅವರುಗಳಿದ್ದ ಪೀಠ ಏಕ್ತಾ ಕಪೂರ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ನೀವು ದೇಶದ ಯುವ ಸಮೂಹವನ್ನು ಹಾಳುಗೆಡವುತ್ತಿದ್ದೀರಿ ಎಂದು ಹೇಳಿದ ನ್ಯಾಯ ಪೀಠ, ಒಟಿಟಿಯಲ್ಲಿ ಜನರಿಗೆ ನೀವು ಯಾವ ರೀತಿ ಆಯ್ಕೆ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಅಲ್ಲದೆ ಒಟಿಟಿ ಯಲ್ಲಿ ಪ್ರಸಾರವಾಗುವುದರಿಂದ ಇದು ಎಲ್ಲರಿಗೂ ಲಭ್ಯವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.