ಪ್ರತೀಕ್ ನಿರ್ದೇಶಿಸಿ ನಾಯಕನಟನಾಗಿ ಅಭಿನಯಿಸಿರುವ ಧ್ರುವತಾರೆ ಚಿತ್ರದ ಏಕಾಂಗಿ ಪಾಡು ಎಂಬ ಲಿರಿಕಲ್ ಸಾಂಗ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ವಿನಯ್ ಕೆ.ಎನ್. ಧ್ವನಿಯಾಗಿರುವ ಈ ಹಾಡಿಗೆ ಸೂರಜ್ ಜೋಯಿಸ್ ಸಂಗೀತ ಸಂಯೋಜನೆ ನೀಡಿದ್ದು, ಸಂಘರ್ಷ ಅವರ ಸಾಹಿತ್ಯವಿದೆ.
ಈ ಚಿತ್ರವನ್ನು ಜಿಪಿ ಸ್ಟುಡಿಯೋ ಫಿಲಂಸ್ ಸಂಸ್ಥೆ ಹಾಗೂ ಶಿವರುದ್ರ ನಿರ್ಮಾಣ ಮಾಡಿದ್ದು, ಪ್ರತೀಕ್ ಹಾಗೂ ಮೌಲ್ಯ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇನ್ನುಳಿದಂತೆ ಕಾರ್ತಿಕ್ ಮಹೇಶ್, ಅಶ್ವಿನ್ ರಾವ್ ಪಲ್ಲಕ್ಕಿ, ರಮೇಶ್ ಭಟ್, ಮೂಗ್ ಸುರೇಶ್, ಪಿಡಿ ಸತೀಶ್ ಚಂದ್ರ, ಪ್ರಭಾವತಿ, ಸಮಯ್, ಸಂಗೀತ ನಾರಾಯಣ್ ತೆರೆ ಹಂಚಿಕೊಂಡಿದ್ದಾರೆ. ಸೋನು ಗೌಡ ಅವರ ವೇಷಭೂಷಣ, ಹಾಗೂ ಪ್ರತೀಕ್ ಅವರ ಸಂಕಲನ ಮತ್ತು ಸಂಭಾಷಣೆ ಇದೆ.