ಏಕಾದಶಿಯ ದಿನದಂದು ವೈಕುಂಠದ ಬಾಗಿಲು ತೆರೆದಿರುತ್ತೆ ಎಂಬ ಪ್ರತೀತಿ ಇದೆ. ಹಾಗಾಗಿ ಅಂದಿನ ದಿನ ಹಲವರು ಏಕಾದಶಿ ಉಪವಾಸ ಕೈಗೊಳ್ಳುತ್ತಾರೆ.
ವಿಷ್ಣುವಿನ ದಿನವಾದ ಏಕಾದಶಿಯಂದು ಅವನ ದರ್ಶನ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬುದನ್ನು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಈ ವರ್ಷದ ಕೊನೆಯ ಏಕಾದಶಿ ಡಿಸೆಂಬರ್ 30 ರಂದು ಬಂದಿದೆ. ಏಕಾದಶಿ ಮತ್ತು ಗುರುವಾರ ಎರಡೂ ಸೇರಿರುವುದರಿಂದ ಇದನ್ನು ಮಹಾಸಂಯೋಗ ಎಂದು ಹೇಳಲಾಗುತ್ತಿದೆ.
ಸಾಮಾನ್ಯವಾಗಿ ಏಕಾದಶಿಯ ವ್ರತ ಒಂದು ದಿನ ಮುಂಚೆಯೇ ಪ್ರಾರಂಭವಾಗುತ್ತದೆ. ಅಂದರೆ ಈ ವರ್ಷ ಡಿಸೆಂಬರ್ 29 ರಂದು ಮಧ್ಯಾಹ್ನ 4.12 ಕ್ಕೆ ಆರಂಭವಾಗಿ ಡಿಸೆಂಬರ್ 30ರ ಮಧ್ಯಾಹ್ನ 1.40ಕ್ಕೆ ಮುಗಿಯುತ್ತದೆ. ನಂತರ 31 ರಂದು ಏಕಾದಶಿಯ ವ್ರತವನ್ನು ಮುರಿಯಬಹುದು.
ಸಫಲ ಏಕಾದಶಿಯ ವ್ರತ ಮಾಡುವವರು ಮೊದಲು ಗಂಗಾಜಲವನ್ನು ಹಾಕಿದ ನೀರಿನಿಂದ ಸ್ನಾನ ಮಾಡಬೇಕು. ಸ್ನಾನವಾದ ನಂತರ ಹಳದಿ ಬಣ್ಣದ ವಸ್ತ್ರವನ್ನು ಧರಿಸಿ ವಿಷ್ಣುವನ್ನು ಹಸುವಿನ ಹಾಲಿನಿಂದ ಅಭಿಷೇಕ ಮಾಡಬೇಕು. ನಂತರ ಶಂಖದಲ್ಲಿ ಹಾಲು ಮತ್ತು ಗಂಗಾಜಲವನ್ನು ಹಾಕಿಕೊಂಡು ಅಭಿಷೇಕ ಮಾಡಬೇಕು. ಅಭಿಷೇಕ ಮುಗಿದ ನಂತರ ಧೂಪ, ದೀಪಗಳಿಂದ ವಿಷ್ಣುವನ್ನು ಪೂಜಿಸಬೇಕು. ಪೂಜೆಯಲ್ಲಿ ಹಳದಿ ಬಣ್ಣದ ಹೂವು, ಹಣ್ಣು ಮತ್ತು ಹಳದಿ ಬಣ್ಣದ ಚಂದನವನ್ನು ಉಪಯೋಗಿಸಬೇಕು. ತುಳಸಿ ಮತ್ತು ಪಂಚಾಮೃತವನ್ನು ಕೂಡ ಅರ್ಪಿಸಬಹುದು.
ಸಫಲ ಎಂಬ ಹೆಸರೇ ಸೂಚಿಸುವಂತೆ ಈ ವೃತವನ್ನು ಮನೆಯಲ್ಲಿ ಒಬ್ಬರು ಮಾಡಿದರೂ ಅದರಿಂದ ಯಶಸ್ಸು, ಸಮೃದ್ಧಿ ಇಡೀ ಕುಟುಂಬಕ್ಕೆ ಸಿಗುತ್ತದೆ. ಈ ವೃತದಿಂದ ಎಲ್ಲ ದುಃಖ, ದೌರ್ಭಾಗ್ಯಗಳು ದೂರವಾಗುತ್ತದೆ.