ಕೋವಿಡ್ ಸಾಂಕ್ರಮಿಕದ ಕಾರಣ ಕಳೆದ ಒಂಬತ್ತು ತಿಂಗಳಿನಿಂದ ಪ್ರವಾಸಿಗರಿಗೆ ಬಾಗಿಲು ಹಾಕಲಾಗಿದ್ದ ಐಫೆಲ್ ಟವರ್ ಅನ್ನು ಇದೀಗ ಮತ್ತೆ ತೆರೆಯಲಾಗಿದೆ. ದ್ವಿತೀಯ ವಿಶ್ವ ಮಹಾಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ಅವಧಿಗೆ ಐಫೆಲ್ ಟವರ್ ಅನ್ನು ಸಾರ್ವಜನಿಕರಿಗೆ ಮುಚ್ಚಲಾಗಿತ್ತು.
ಅಡಿಯಿಂದ ಮುಡಿವರೆಗೂ 106ರ ಅಡಿ ಎತ್ತರ ಇರುವ ಈ ಗೋಪುರದ ಲಿಫ್ಟ್‌ಗಳು ಇದೀಗ ಮತ್ತೆ ಜೀವಂತಿಕೆ ಪಡೆಯಲಿದ್ದು, ತನ್ನಲ್ಲಿಗೆ ಬರುವ ಪ್ರವಾಸಿಗರನ್ನು ಪ್ಯಾರಿಸ್ ನಗರದ ಅಂದವನ್ನು ಕಣ್ತುಂಬಿಕೊಳ್ಳಲು ಮೇಲಕ್ಕೆ ಒಯ್ಯಲಿವೆ.
ಭಾರತಕ್ಕೆ 3 ನೇ ಅಲೆ ಯಾವಾಗ ಬರುತ್ತೆ…? ಪರಿಣಾಮ ಹೇಗಿರುತ್ತೆ…? ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ
ಇದೇ ವೇಳೆ, ಸಾಂಕ್ರಮಿಕದ ವಿರುದ್ಧ ಮುನ್ನೆಚ್ಚರಿಕೆಯಿಂದಾಗಿ ಪ್ರತಿನಿತ್ಯ ಬರುವ ಪ್ರವಾಸಿಗರ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಿ, 13,000 ಮಂದಿಗೆ ಮಾತ್ರವೇ ಈ ಗೋಪುರಕ್ಕೆ ಭೇಟಿ ಕೊಡಲು ಅವಕಾಶ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಮುಂದಿನ ಬುಧವಾರದಿಂದ ಗೋಪುರ ನೋಡಲಿಚ್ಛಿಸುವ ಮಂದಿ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ಇಲ್ಲವೇ ಕೋವಿಡ್ ನೆಗೆಟಿವ್ ಎಂದು ದೃಢೀಕರಣ ತೋರಬೇಕಾಗುತ್ತದೆ.