
ಬೆಂಗಳೂರು : ಇಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ, ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ನೃಪತುಂಗ ರಸ್ತೆಯ ವೈ.ಎಂ.ಸಿ.ಎ ಮೈದಾನದಕ್ಕೆ ಮದ್ಯಾಹ್ನ 03-00 ರಿಂದ ರಾತ್ರಿ 09-00 ಗಂಟೆಯವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಿವಿಧ ಸ್ಥಳಗಳಿಂದ ಆಗಮಿಸುವುದರಿಂದ ವಾಹನ ಸವಾರರು / ಚಾಲಕರುಗಳು ಈ ಕೆಳಕಂಡ ರಸ್ತೆಗಳನ್ನು ಬಳಸದೇ ಬದಲೀ ಮಾರ್ಗದಲ್ಲಿ ಸಂಚರಿಸಲು ಬೆಂಗಳೂರು ಸಂಚಾರ ಪೊಲೀಸರು ಕೋರಿದ್ದಾರೆ.

