ಕಲೆಗೆ ಯಾವುದೇ ಗಡಿಗಳಿಲ್ಲ ಎನ್ನುತ್ತಾರೆ. ಅದೀಗ ನಿಜವಾಗಿರುವ ವಿಡಿಯೋ ಒಂದು ವೈರಲ್ ಆಗಿದೆ. ಈಜಿಪ್ಟ್‌ನ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಗುಜರಾತ್‌ನ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುವಾಗ ‘ಶಿವಭಕ್ತೆ’ ಆಗಿದ್ದಾರೆ. ತನ್ನ ತಂದೆ-ತಾಯಿಯ ಆಕ್ಷೇಪದ ನಡುವೆಯೂ ಈಕೆ ‘ತಾಂಡವ ನೃತ್ಯ’ವನ್ನು ಮಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ.
ರೀವಾ ಅಬ್ದೆಲ್ ನಾಸರ್ ಎಂಬ ಮುಸ್ಲಿಂ ವಿದ್ಯಾರ್ಥಿನಿ ಕಳೆದ ನಾಲ್ಕು ವರ್ಷಗಳಿಂದ ಬರೋಡಾ ಎಂಎಸ್ ವಿಶ್ವವಿದ್ಯಾನಿಲಯದಲ್ಲಿ ಪ್ರದರ್ಶನ ಕಲೆಯ ವಿದ್ಯಾರ್ಥಿನಿಯಾಗಿದ್ದಾರೆ. ರೇವಾ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ‘ತಾಂಡವ ನೃತ್ಯ’ವನ್ನು ಸಹ ಪ್ರದರ್ಶಿಸುತ್ತಿದ್ದಾರೆ. ಕಥಕ್ ನೃತ್ಯದಲ್ಲಿ ಪದವಿ ಗಳಿಸಿದ್ದಾರೆ.
ಮಹಾಶಿವರಾತ್ರಿ ಕಾರ್ಯಕ್ರಮಕ್ಕೂ ಮುನ್ನ ರೇವಾ ಅದ್ಭುತ ನೃತ್ಯ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ. ಇದು ಮಾತ್ರವಲ್ಲದೆ, ಅಹಮದಾಬಾದ್‌ನಲ್ಲಿ ನಡೆದ ವೈಬ್ರೆಂಟ್ ಗುಜರಾತ್ ಎಜುಕೇಶನ್ ಶೃಂಗಸಭೆ 2022 ರ ಸಂದರ್ಭದಲ್ಲಿ ರೀವಾ ಕೂಡ ಪ್ರದರ್ಶನ ನೀಡಿದ್ದರು.
ರೇವಾ ಪ್ರಕಾರ, ಶಿವ ತಾಂಡವ ನೃತ್ಯವು ಅಂತಿಮ ರೀತಿಯ ನೃತ್ಯ ಪ್ರದರ್ಶನವಾಗಿದೆ. ತಾಯಿ ಮಗಳಿಗೆ ಪ್ರೋತ್ಸಾಹಿಸುತ್ತಿದ್ದರೂ ಆಕೆಯ ತಂದೆ ಶಿವ ತಾಂಡವ ನೃತ್ಯವನ್ನು ಮಾಡುವುದನ್ನು ವಿರೋಧಿಸಿದ್ದರಿಂದ ಇನ್ನು ಮುಂದೆ ನರ್ತಿಸಲು ಸಾಧ್ಯವಾಗುವುದಿಲ್ಲ ಎಂದು ನೋವನ್ನು ತೋಡಿಕೊಂಡಿದ್ದಾರೆ ವಿದ್ಯಾರ್ಥಿನಿ.