ಸೌದಿ ಅರೇಬಿಯಾದಲ್ಲಿ ಲ್ಯಾಂಡಿಂಗ್ ಸಮಯದಲ್ಲಿ ಈಜಿಪ್ಟ್ ಏರ್ ಕೈರೋ-ಜೆಡ್ಡಾ ವಿಮಾನದ ಟೈರ್ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ.
ಸೌದಿ ಅರೇಬಿಯಾದಲ್ಲಿ ಭಾನುವಾರ ಮುಂಜಾನೆ ಈಜಿಪ್ಟ್ ಏರ್ ಜೆಟ್ ಲೈನರ್ ಟೈರ್ ಸ್ಫೋಟಿಸಿದೆ. ಆದರೆ, ತನ್ನ ಗಮ್ಯಸ್ಥಾನದಲ್ಲಿ ಸುರಕ್ಷಿತ ಲ್ಯಾಂಡಿಂಗ್ ಮಾಡಿದೆ.
ಭಾನುವಾರ ಮುಂಜಾನೆ ಕೈರೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಂಎಸ್ 643 ವಿಮಾನವು ಹೊರಟಿದ್ದು, ಸೌದಿ ಅರೇಬಿಯಾದ ಕರಾವಳಿ ನಗರವಾದ ಜೆಡ್ಡಾದಲ್ಲಿರುವ ಕಿಂಗ್ ಅಬ್ದುಲ್ ಅಜೀಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅದರ ಒಂದು ಟೈರ್ ಒಡೆದಿದೆ ಎಂದು ಈಜಿಪ್ಟ್ ಏರ್ ಹೇಳಿಕೆಯಲ್ಲಿ ತಿಳಿಸಿದೆ.
ಬೋಯಿಂಗ್ 737 ರನ್ ವೇಯಲ್ಲಿ ಸುರಕ್ಷಿತವಾಗಿ ಇಳಿಯಿತು ಮತ್ತು ಎಲ್ಲಾ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಇಳಿದಿದ್ದಾರೆ. ಸಮಸ್ಯೆಗೆ ಕಾರಣವೇನು ಎಂಬುದನ್ನು ಏರ್‌ಲೈನ್ ವಿವರಿಸಿಲ್ಲ. ವಿಮಾನದ ಪರೀಕ್ಷೆ ಮತ್ತು ನಿರ್ವಹಣೆ ನಡೆಯುತ್ತಿದೆ ಎಂದು ಹೇಳಿದೆ.