ಪ್ರಾಣಿಗಳಲ್ಲೇ ಆಗಿರಬಹುದು ಅಥವಾ ಮನುಷ್ಯರಲ್ಲೇ ಆಗಿರಬಹುದು ಮಗುವಿನ ಆರೈಕೆ, ಲಾಲನೆ ಪಾಲನೆಯಲ್ಲಿ ಮುಖ್ಯ ಪಾತ್ರ ಹೆಣ್ಣಿನದೇ ಆಗಿರುತ್ತದೆ. ಆದರೆ ಈ ಜಲಚರದ ವಿಷಯದಲ್ಲಿ ಹಾಗಲ್ಲ. ಇಲ್ಲಿ ಹೆಣ್ಣು ಮೊಟ್ಟೆ ಇಟ್ಟ ನಂತರ ಮುಂದಿನ ಕರ್ತವ್ಯವನ್ನು ಗಂಡು ಜೀವಿಯೇ ನಿರ್ವಹಿಸುತ್ತದೆ.
ಅಮೆರಿಕಾದ ಪೂರ್ವ ಕರಾವಳಿಯ ಅಟ್ಲಾಂಟಿಕ್ ಸಾಗರದಲ್ಲಿ ಕಂಡುಬರುವ ಕ್ಯಾಟ್ ಫಿಶ್ ನ ಸಂತಾನೋತ್ಪತ್ತಿ ಆಶ್ಚರ್ಯಕರವಾಗಿದೆ. ಗರ್ಭ ಧರಿಸಿದ ಹೆಣ್ಣು ಕ್ಯಾಟ್ ಫಿಶ್, ಮೊಟ್ಟೆ ಇಟ್ಟ ತಕ್ಷಣ ಆ ಮೊಟ್ಟೆಗಳನ್ನು ಗಂಡು ಕ್ಯಾಟ್ ಫಿಶ್ ತನ್ನ ಬಾಯಲ್ಲಿ ಇಟ್ಟುಕೊಳ್ಳುತ್ತೆ. ಮೊಟ್ಟೆ ಇಟ್ಟ ನಂತರ ಹೆಣ್ಣು ಕ್ಯಾಟ್ ಫಿಶ್ ನ ಜವಾಬ್ದಾರಿ ಮುಗಿದಂತೆಯೇ. ಏಕೆಂದರೆ ಮುಂದಿನ ಕೆಲಸವನ್ನೆಲ್ಲ ಗಂಡು ಫಿಶ್ ನೋಡಿಕೊಳ್ಳುತ್ತದೆ.
ಪ್ರತಿ ನಿತ್ಯ ಮೂಸಂಬಿ ಜ್ಯೂಸ್ ಸೇವಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ
ಹೆಣ್ಣು ಮೀನು ಸುಮಾರು 50 ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳು ಗೋಲಿ ಗಾತ್ರದ್ದಾಗಿರುತ್ತವೆ. ಗಂಡು ಮೀನು ಸುಮಾರು ಒಂದು ತಿಂಗಳ ಕಾಲ ಎಲ್ಲ ಮೊಟ್ಟೆಗಳನ್ನೂ ತನ್ನ ಬಾಯಿಯಲ್ಲಿಟ್ಟು ಕಾಪಾಡುತ್ತೆ. ಬಾಯಲ್ಲಿ ಮೊಟ್ಟೆಗಳಿರುವ ಕಾರಣ ಆ ಒಂದು ತಿಂಗಳ ಅವಧಿಯಲ್ಲಿ ಅದು ಆಹಾರವನ್ನೇ ತೆಗೆದುಕೊಳ್ಳುವುದಿಲ್ಲ. ಮೊಟ್ಟೆಯೊಡೆದು ಮರಿಗಳು ಹೊರಬಂದ ನಂತರ ಮತ್ತೆ ಆ ಮರಿಗಳನ್ನು ಗಂಡು ಮೀನೇ ನೋಡಿಕೊಳ್ಳುತ್ತೆ. ಶತ್ರುಗಳು ತನ್ನ ಮರಿಗಳ ಮೇಲೆ ದಾಳಿ ಮಾಡದಂತೆ ಕಾಪಾಡುವ ಜವಾಬ್ದಾರಿ ಕೂಡ ಅದರದೇ ಆಗಿರುತ್ತದೆ. ನೋಡಿ ಹೇಗಿದೆ ಸೃಷ್ಟಿಯ ವೈಚಿತ್ರ್ಯ.