ತಮ್ಮ ಮಕ್ಕಳು ಸುಂದರವಾಗಿರಬೇಕೆಂದು ಎಲ್ರೂ ಬಯಸ್ತಾರೆ. ಬೆಳ್ಳಗೆ, ಗೊಂಬೆಯಂತಿರಬೇಕೆನ್ನುವ ಜೊತೆಗೆ ಬುದ್ಧಿವಂತರಾಗಿಬೇಕೆಂದು ಕನಸು ಕಾಣ್ತಾರೆ. ಗರ್ಭಿಣಿಯಾಗಿದ್ದಾಗ ಯಾವ ಆಹಾರ ಸೇವನೆ ಮಾಡಿದ್ರೆ ಮಕ್ಕಳು ಸ್ಮಾರ್ಟ್ ಆಗಿ ಹುಟ್ಟುತ್ತಾರೆ ಅಂತಾ ವೈದ್ಯರನ್ನು ಅನೇಕರು ಪ್ರಶ್ನೆ ಮಾಡ್ತಾರೆ. ಸ್ಮಾರ್ಟ್ ಮಕ್ಕಳನ್ನು ಪಡೆಯಲು ನಾನಾ ಪ್ರಯತ್ನ ಮಾಡ್ತಾರೆ.
ಇನ್ಮುಂದೆ ತುಂಬಾ ಕಷ್ಟಪಡಬೇಕಾಗಿಲ್ಲ. ಈ ಬಗ್ಗೆ ನಡೆದ ಸಂಶೋಧನೆಯೊಂದು ಏನನ್ನು ಸೇವಿಸಿದ್ರೆ ಮಕ್ಕಳು ಸುಂದರ ಹಾಗೂ ಬುದ್ಧಿವಂತರಾಗ್ತಾರೆ ಎಂಬುದನ್ನು ಹೇಳಿದೆ. ನೀವು ಸಿಕ್ಕಾಪಟ್ಟೆ ಯೋಚನೆ ಮಾಡಬೇಕಾಗಿಲ್ಲ. ಗರ್ಭಿಣಿಯರ ಡಯಟ್ ನಲ್ಲಿ ಮೊಟ್ಟೆ ಇದ್ರೆ ಸಾಕು. ಮೊಟ್ಟೆ ನಮ್ಮ ಶರೀರವನ್ನು ಆರೋಗ್ಯವಾಗಿಡುತ್ತದೆ. ಜೊತೆಗೆ ಗರ್ಭವತಿ ಇದನ್ನು ಸೇವನೆ ಮಾಡಿದ್ರೆ ಮಕ್ಕಳ ಮೆದುಳು, ಕಲಿಕೆ ಸಾಮರ್ಥ್ಯದ ಮೇಲೆ ಇದು ಪ್ರಭಾವ ಬೀರುತ್ತದೆ ಎಂದು ಅಧ್ಯಯನ ಹೇಳಿದೆ.
ಗರ್ಭಿಣಿ ಎರಡನೇ ತಿಂಗಳಿನಿಂದ ಮೊಟ್ಟೆ ಸೇವನೆ ಮಾಡಿದ್ರೆ ಬಹಳ ಒಳ್ಳೆಯದೆಂದು ಅಧ್ಯಯನ ಹೇಳಿದೆ. ಮೊಟ್ಟೆಯಲ್ಲಿ ಪ್ರೋಟೀನ್ ಅಂಶ ಜಾಸ್ತಿ ಇರುತ್ತದೆ. ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣಕ್ಕೆ ಪ್ರೋಟೀನ್ ಅತ್ಯವಶ್ಯಕ. ಗರ್ಭಿಣಿ ಮೊಟ್ಟೆ ಸೇವನೆ ಮಾಡಿದ್ರೆ ಗರ್ಭದಲ್ಲಿರುವ ಭ್ರೂಣ ಸರಿಯಾಗಿ ಬೆಳವಣಿಗೆ ಹೊಂದಲಿದೆ.
ಮೊಟ್ಟೆಯಲ್ಲಿ 12 ಜೀವಸತ್ವಗಳಿರುತ್ತವೆ. ಜೊತೆಗೆ ವಿವಿಧ ರೀತಿಯ ಲವಣಗಳು ಇದರಲ್ಲಿರುತ್ತವೆ. ಕೋಲೀನ್ ಮತ್ತು ಒಮೆಗಾ -3 ಕೊಬ್ಬಿನ ಆಮ್ಲ ಮಗುವಿನ ಸಂಪೂರ್ಣ ಬೆಳವಣಿಗೆಗೆ ನೆರವಾಗುತ್ತದೆ. ಇದರ ಸೇವನೆಯಿಂದ ಮಗುವಿಗೆ ಮಾನಸಿಕ ಅಸ್ವಸ್ಥತೆ ಕಾಡುವುದಿಲ್ಲ.
ಗರ್ಭಿಣಿಯ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಇದ್ದಲ್ಲಿ ಪ್ರತಿದಿನ ಒಂದು ಮೊಟ್ಟೆ ಸೇವನೆ ಮಾಡಬೇಕು. ಕೊಲೆಸ್ಟ್ರಾಲ್ ಪ್ರಮಾಣ ಜಾಸ್ತಿ ಇದ್ದಲ್ಲಿ ಹಳದಿ ಭಾಗವನ್ನು ಸೇವನೆ ಮಾಡಬಾರದು.