ಭಾರತದೊಂದಿಗೆ ವ್ಯಾಪಾರ ಸಮರಕ್ಕೆ ಮುಂದಾಗಿರುವ ಕಾರಣ ಅಮೆರಿಕದಲ್ಲಿ ಸಾವಯವ ಮೊಟ್ಟೆಗಳ ಬೆಲೆ ಮುಂದಿನ ದಿನಗಳಲ್ಲಿ ಏರುವ ಸಾಧ್ಯತೆ ಇದೆ. ಅಮೆರಿಕದ ಸೋಯಾ ಆಧಾರಿತ ಆಹಾರದ ಅಗತ್ಯತೆಯ 40%ರಷ್ಟನ್ನು ಭಾರತದಂಥ ದಕ್ಷಿಣ ಏಷ್ಯಾದ ದೇಶಗಳು ಪೂರೈಕೆ ಮಾಡುತ್ತಿವೆ. ಈ ಸೋಯಾ ಆಹಾರವನ್ನು ಅಮೆರಿಕದಲ್ಲಿ ಸಾವಯವ ಮೊಟ್ಟೆಯಿಡುವ ಕೋಳಿಗಳಿಗೆ ಉಣಿಸಲು ಬಳಸಲಾಗುತ್ತದೆ.
ʼಮೂತ್ರʼದ ಬಣ್ಣ ಹೇಳುತ್ತೆ ಆರೋಗ್ಯ ಸಂಬಂಧಿ ಸಮಸ್ಯೆ
ಭಾರತದಿಂದ ಬರುವ ಸೋಯಾ ಉತ್ಪನ್ನಗಳ ಮೇಲೆ ಅಮೆರಿಕ ಸಬ್ಸಿಡಿಯಂಥ ಕ್ರಮಗಳ ಮೂಲಕ ತೊಡೆದು ಹಾಕಲು ನೋಡುತ್ತಿರುವ ಕಾರಣ ಅಲ್ಲಿನ ಕಂಪನಿಗಳ ಮೇಲೆ ಹೊಡೆತ ಬಿದ್ದಿದೆ. ಮುಂದಿನ ದಿನಗಳಲ್ಲಿ ಭಾರತದಿಂದ ಬರುವ ಉತ್ಪನ್ನಗಳ ಬೆಲೆ ಏರುವ ಸಾಧ್ಯತೆ ಇದೆ.
ಸೋಯಾ ಪೂರೈಕೆದಾರರು ದೊಡ್ಡ ಪ್ರಮಾಣದಲ್ಲಿ ಸರಕನ್ನು ಮುಚ್ಚಿಟ್ಟುಕೊಳ್ಳಲು ಆರಂಭಿಸಿರುವ ಕಾರಣ ಮುಂದಿನ ದಿನಗಳಲ್ಲಿ ಈ ಉತ್ಪನ್ನಗಳ ಬೆಲೆಯಲ್ಲಿ ತೀವ್ರಗತಿಯ ಏರಿಕೆ ಕಾಣುವ ಸಾಧ್ಯತೆ ಇದೆ. ಒಂದು ಡಜ಼ನ್ ಮೊಟ್ಟೆ ಉತ್ಪಾದಿಸಲು ತಗುಲುವ ವೆಚ್ಚ ಈ ಕಾರಣದಿಂದ 15 ಸೆಂಟ್‌ಗಳಿಂದ 20 ಸೆಂಟ್‌ಗಳಿಗೆ ಏರುವ ನಿರೀಕ್ಷೆ ಇದೆ.