ಮೊಟ್ಟೆ ಬಳಸಿದ ಬಳಿಕ ಅದರ ಚಿಪ್ಪನ್ನು ಏನು ಮಾಡುತ್ತೀರಿ. ಕಸದೊಂದಿಗೆ ಎಸೆಯುತ್ತೀರಾ? ಹಾಗೆ ಮಾಡದಿರಿ. ಅದನ್ನು ಹೇಗೆ ಬಳಸಬಹುದು ಇಲ್ಲಿ ಕೇಳಿ.
ತರಕಾರಿ ಕತ್ತರಿಸುತ್ತಿರುವಾಗ ಸಡನ್ ಅಗಿ ನಿಮ್ಮ ಕೈಬೆರಳು ಕೊಯ್ದರೆ ಅಲ್ಲೆ ಇರುವ ಮೊಟ್ಟೆಯ ಹೊರಭಾಗವನ್ನು ನಿಮ್ಮ ಗಾಯಕ್ಕೆ ಬ್ಯಾಂಡೇಜ್ ಆಗಿ ಬಳಸಬಹುದು.
ಎಗ್ ಶೆಲ್ ಗಳನ್ನು ಪುಡಿ ಮಾಡಿ ಆಪಲ್ ಸೈಡರ್ ವಿನೆಗರ್ ಸೇರಿಸಿ. ನಾಲ್ಕೈದು ದಿನದ ಬಳಿಕ ಅದನ್ನು ಚೆನ್ನಾಗಿ ಕಿವುಚಿ. ಮುಖಕ್ಕೆ ಮಾಸ್ಕ್ ರೀತಿಯಲ್ಲಿ ಅಪ್ಲೈ ಮಾಡಿಕೊಳ್ಳಿ. ಬಳಿಕ ತಣ್ಣಗಿನ ನೀರಿನಿಂದ ಮುಖ ತೊಳೆದುಕೊಂಡರೆ ನಿಮ್ಮ ತ್ವಚೆ ಕಾಂತಿಯುತವಾಗುತ್ತದೆ.
ಹಲ್ಲುಗಳನ್ನು ಸ್ವಚ್ಛಗೊಳಿಸಲು ಎಗ್ ಶೆಲ್ ಗಳನ್ನು ಬಳಸುತ್ತಾರೆ. ಪ್ರತಿದಿನ ಬ್ರಶ್ ಮಾಡಿದ ಬಳಿಕ ಇದರ ಪುಡಿಯಿಂದ ನಿಮ್ಮ ಹಲ್ಲನ್ನು ತಿಕ್ಕಿ ನೋಡಿ. ಕೆಲವೇ ದಿನಗಳು ಹೀಗೆ ಮಾಡುವುದರಿಂದ ನಿಮ್ಮ ಹಲ್ಲು ಬೆಳ್ಳಗಾಗುತ್ತದೆ.
ಮನೆಯಂಗಳದಲ್ಲಿ ಇರುವ ಕೈತೋಟಕ್ಕೆ ಎಗ್ ಶೆಲ್ ಗಳು ಅತ್ಯುತ್ತಮ ಗೊಬ್ಬರವಾಗಬಲ್ಲವು. ಇದರಲ್ಲಿರುವ ಕ್ಯಾಲ್ಸಿಯಂ ಸಸ್ಯಗಳಿಗೆ ಪೋಷಣೆ ನೀಡುತ್ತವೆ.