ಮಕ್ಕಳಲ್ಲಿ ಅಪೌಷ್ಟಿಕತೆ ಕಡಿಮೆ ಮಾಡಲು ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಮಕ್ಕಳಿಗೆ ವಾರದಲ್ಲಿ ಐದು ದಿನ ಹಾಲು, ಮೂರು ಬಾರಿ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕೆ ಪರ-ವಿರೋಧ ಕೇಳಿ ಬರುತ್ತಿದ್ದು, ಇದರ ಮಧ್ಯೆಯೇ ಬುಧವಾರದಂದು ಬೀದರ್ ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸಲಾಗಿದೆ.
ಉರ್ದು ಹಾಗೂ ಮರಾಠಿ ಶಾಲೆಗಳಲ್ಲಿ ಎಲ್ಲ ಮಕ್ಕಳು ಮೊಟ್ಟೆ ಸ್ವೀಕರಿಸಿದ್ದು, ಆದರೆ ಕನ್ನಡ ಶಾಲೆಗಳಲ್ಲಿ ಕೆಲ ವಿದ್ಯಾರ್ಥಿಗಳು ಮೊಟ್ಟೆ ಹಾಗೂ ಕೆಲ ವಿದ್ಯಾರ್ಥಿಗಳು ಬಾಳೆಹಣ್ಣು ಸೇವಿಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ ಮೊಟ್ಟೆ ವಿತರಣೆಗೆ ಯಾವುದೇ ಪೋಷಕರು ಸಹ ವಿರೋಧ ವ್ಯಕ್ತಪಡಿಸಿಲ್ಲ.
ಕತ್ರಿನಾ – ವಿಕ್ಕಿ ಕೌಶಲ್ ವಿವಾಹಕ್ಕೆ ಹಾಜರಾಗುವ ಅತಿಥಿಗಳಿಗೆ ವಿಧಿಸಲಾಗಿದೆ ಈ ಎಲ್ಲ ‘ಷರತ್ತು’
ಇದರ ಮಧ್ಯೆ ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸದಂತೆ ಕೆಲ ಸಂಘಟನೆಗಳು ಮನವಿ ಮಾಡಿದ್ದರೆ ಮತ್ತೆ ಕೆಲ ಸಂಘಟನೆಗಳು ಮಕ್ಕಳಲ್ಲಿ ಅಪೌಷ್ಟಿಕತೆ ಕಡಿಮೆ ಮಾಡಲು ಮೊಟ್ಟೆ ವಿತರಿಸುತ್ತಿರುವುದು ಸೂಕ್ತವಾಗಿದೆ ಎಂದು ಹೇಳಿವೆ.