alex Certify ಮುಟ್ಟಿನ ನೋವಿಗೆ ಆಯುರ್ವೇದದಲ್ಲಿದೆ ಪರಿಣಾಮಕಾರಿ ಮದ್ದು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಟ್ಟಿನ ನೋವಿಗೆ ಆಯುರ್ವೇದದಲ್ಲಿದೆ ಪರಿಣಾಮಕಾರಿ ಮದ್ದು…!

ಪ್ರತಿ ತಿಂಗಳೂ ಋತುಚಕ್ರದ ಸಮಯದಲ್ಲಿ ಮಹಿಳೆಯರು ಸಾಕಷ್ಟು ನೋವು ಅನುಭವಿಸುತ್ತಾರೆ. ಅನಿವಾರ್ಯವಾಗಿ ಪೇಯ್ನ್‌ ಕಿಲ್ಲರ್‌ ಸೇವಿಸುತ್ತಾರೆ. ಹತ್ತಾರು ಬಗೆಯ ಮನೆಮದ್ದುಗಳನ್ನು ಕೂಡ ಪ್ರಯತ್ನಿಸುತ್ತಾರೆ. ಆದರೆ ಈ ಪೇಯ್ನ್‌ ಕಿಲ್ಲರ್‌ಗಳಿಂದ ಅಡ್ಡಪರಿಣಾಮಗಳಾಗುತ್ತವೆ. ಆದ್ದರಿಂದ ನೋವು ನಿವಾರಕಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಮುಟ್ಟಿನ ನೋವಿನಿಂದ ಮುಕ್ತಿ ಪಡೆಯಲು ಆಯುರ್ವೇದದಲ್ಲಿ ಸುರಕ್ಷಿತ ಮಾರ್ಗಗಳಿವೆ. ನೈಸರ್ಗಿಕ ಪರಿಹಾರಗಳು, ಸರಿಯಾದ ಆಹಾರ ಸೇವನೆ ಮತ್ತು ಆರೋಗ್ಯಕರ ಜೀವನಶೈಲಿ ಇದರಲ್ಲಿ ಸೇರಿವೆ.

ಆಯುರ್ವೇದವು ಹಾರ್ಮೋನ್ ಸಮತೋಲನವನ್ನು ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರವನ್ನು ಬೆಂಬಲಿಸುತ್ತದೆ. ಮುಟ್ಟಿನ ಸಮಯದಲ್ಲಿ ನೋವಿನಿಂದ ಪಾರಾಗಲು ಶುಂಠಿ, ಅರಿಶಿನ ಮತ್ತು ಎಳ್ಳಿನಂತಹ ಸೂಪರ್‌ಫುಡ್‌ಗಳಿಗೆ ಒತ್ತು ನೀಡಲಾಗುತ್ತದೆ. ಇವುಗಳ ಹೊರತಾಗಿ  ಮೆಂತ್ಯದ ಕಾಳು, ಓಮ ಮತ್ತು ಬೆಲ್ಲದಂತಹ ಸಾಮಾನ್ಯ ಮಸಾಲೆಗಳು ಮುಟ್ಟಿನ ನೋವನ್ನು ಕಡಿಮೆ ಮಾಡುತ್ತವೆ.

ಯೋಗಾಸನ – ಬಾಲಾಸನ, ಬದ್ಧ ಕೋನಾಸನ, ಉತ್ತಾನಾಸನ ಮತ್ತು ಪ್ರಾಣಾಯಾಮದಂತಹ ವಿಶೇಷ ಯೋಗಾಸನಗಳು ಮುಟ್ಟಿನ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಒತ್ತಡವನ್ನು ನಿವಾರಿಸಿ ಒಟ್ಟಾರೆ ರಕ್ತಪರಿಚಲನೆಯನ್ನು ಸುಧಾರಿಸುತ್ತವೆ. ಋತುಚಕ್ರದ ಸಮಯದಲ್ಲಿ ವಿಪರೀತ ನೋವಿನಿಂದ ಬಳಲುತ್ತಿರುವವರು ಯೋಗಾಸನವನ್ನು ಆಶ್ರಯಿಸಬಹುದು.

ಆಯುರ್ವೇದ ಗಿಡಮೂಲಿಕೆಗಳ ಬಳಕೆಅಶ್ವಗಂಧ ಮತ್ತು ಶತಾವರಿ ಮುಂತಾದ ಗಿಡಮೂಲಿಕೆಗಳು ಋತುಚಕ್ರದ ಸಮಸ್ಯೆಗಳನ್ನು ನಿವಾರಿಸುತ್ತವೆ. ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವ ಮೂಲಕ ಮುಟ್ಟಿನ ಸಮಸ್ಯೆಗಳನ್ನು ನಿವಾರಿಸಬಹುದು.

ಆಯುರ್ವೇದದ ಪ್ರಕಾರ ಭಾವನೆಗಳು ಮತ್ತು ಮುಟ್ಟಿನ ಆರೋಗ್ಯದ ನಡುವೆ ಆಳವಾದ ಸಂಬಂಧವಿದೆ. ಧ್ಯಾನ ಮತ್ತು ಸಾವಧಾನತೆ ಸೇರಿದಂತೆ ಒತ್ತಡ ನಿರ್ವಹಣೆಗೆ ಒತ್ತು ನೀಡಬೇಕು. ಋತುಚಕ್ರದ ಸಮಯದಲ್ಲಿ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬೇಕು. ದೇಹಕ್ಕೂ ವಿಶ್ರಾಂತಿ ನೀಡಬೇಕು. ಸ್ವ-ಆರೈಕೆಗೆ ಗಮನ ನೀಡಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...