ದಾವಣಗೆರೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗುವ ಸಿಇಟಿ, ನೀಟ್ ಮುಖಾಂತರ ಎಂ.ಬಿ.ಬಿ.ಎಸ್., ಬಿಡಿಎಸ್, ಬಿಇ, ಬಿಟೆಕ್ ಮತ್ತು ಅಯುಷ್ ಕೋರ್ಸ್ ಗಳಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃಧ್ಧಿ ನಿಗಮದಿಂದ ಅರಿವು ಯೋಜನೆಯಡಿಯಲ್ಲಿ ವಿಧ್ಯಾಭ್ಯಾಸ ಸಾಲ ಪಡೆಯಲು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ನಿಗಮದ ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.
2024-25 ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕೆಇಎ, ಸಿಇಟಿ, ನೀಟ್ ಮೂಲಕ ಆಯ್ಕೆಗೊಂಡ ಪದವಿ ಮತ್ತು ಸ್ನಾತಕೋತ್ತರ ಕೋರ್ಸಗಳಾದ ವೈದ್ಯಕೀಯ(ಎಂಬಿಬಿಎಸ್) ದಂತ ವೈದ್ಯಕೀಯ(ಬಿಡಿಎಸ್), ಬಿ.ಇ, ಬಿ.ಟೆಕ್, ಬ್ಯಾಚುಲರ್ ಆಫ್ ಆರ್ಕಿಟೆಕ್ಟರ್, ಬಿ.ಆಯುಷ್, ಫಾರ್ಮಸಿ, ಕೃಷಿ ವಿಜ್ಞಾನ ಮತ್ತು ಪಶು ವೈದ್ಯಕೀಯ ಇಂತಹ ಕೋರ್ಸಗಳಿಗೆ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು, ಅರಿವು ವಿದ್ಯಾಭ್ಯಾಸ ಸಾಲ(ಫ್ರೆಶ್) ಯೋಜನೆಯಡಿಯಲ್ಲಿ ಆನ್‌ಲೈನ್ ಮೂಲಕ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ವಿದ್ಯಾರ್ಥಿಗಳು ಅರಿವು ವಿದ್ಯಾಭ್ಯಾಸ ಸಾಲ ಯೋಜನೆಗೆ ನಿಗಮದ ಅಂತರಜಾಲದಿಂದ ಆನಲೈನ್ ಮೂಲಕ ಅರ್ಜಿಯನ್ನು ಜುಲೈ 7, 2024 ರೋಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ: 0836-2748226 ಸಂಪರ್ಕಿಸಬಹುದು ಅಥವಾ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲಾನಾ ಆಝಾದ ಭವನ, ಸರ್ಕಾರಿ ಮುದ್ರಣಾಲಯದ ಹತ್ತಿರ, ಜಿಲ್ಲಾ ವ್ಯವಸ್ಥಾಪಕರವರ ಕಚೇರಿಗೆ ಭೇಟಿ ನೀಡಬಹುದು ಎಂದು ಕರ್ನಾಟಕ ಅಲ್ಪಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.