ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ ಸದ್ದಿಲ್ಲದೆ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಿದೆ. 2024 -25 ನೇ ಸಾಲಿಗೆ ಪಠ್ಯಪುಸ್ತಕಗಳನ್ನು ಶಿಕ್ಷಣ ಇಲಾಖೆ ಪರಿಷ್ಕರಣೆ ಮಾಡಿದೆ.
ಡಾ. ಮಂಜುನಾಥ ಹೆಗಡೆ ನೇತೃತ್ವದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ನಡೆಸಲಾಗಿದೆ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಪರಿಷ್ಕರಣೆ ನಡೆಸಿ ವರದಿ ನೀಡಿದೆ. ತಜ್ಞರು ಪಠ್ಯ ಪುಸ್ತಕ ಪರಿಷ್ಕರಿಸಿ ವರದಿ ಸಿದ್ದಪಡಿಸಿದ್ದರು. ಒಂದರಿಂದ 10ನೇ ತರಗತಿಗೆ ಪಠ್ಯಪುಸ್ತಕಗಳನ್ನು ಶಾಲಾ ಶಿಕ್ಷಣ ಇಲಾಖೆ ಪರಿಷ್ಕರಿಸಿದೆ.
ಕೆಲವು ಪಠ್ಯಗಳನ್ನು ಕೈ ಬಿಟ್ಟಿದ್ದು, ಹೊಸ ಪಠ್ಯಗಳ ಸೇರ್ಪಡೆ ಮಾಡಲಾಗಿದೆ. ಕೆಲವು ಹಳೆ ಪಠ್ಯಗಳ ತಿದ್ದುಪಡಿ ಮಾಡಲಾಗಿದೆ. ನಿವೃತ್ತ ಪ್ರಾಧ್ಯಾಪಕ ಮಂಜುನಾಥ ಹೆಗಡೆ ನೇತೃತ್ವದ ಸಮಿತಿ ನೇತೃತ್ವದಲ್ಲಿ ವಿಷಯವಾರು ತಜ್ಞರ ಸಮಿತಿ ಪರಿಷ್ಕರಣೆ ಕಾರ್ಯ ಕೈಗೊಂಡಿದೆ.
ಆರನೇ ತರಗತಿ ಇತಿಹಾಸದ ಪರಿಚಯ ಆರಂಭಿಕ ಸಮಾಜ ಕುರಿತ ಮಾಹಿತಿ ಇರುವ ಅಧ್ಯಾಯ ಸೇರ್ಪಡೆ ಮಾಡಲಾಗಿದೆ. ನಮ್ಮ ಹೆಮ್ಮೆಯ ಕರ್ನಾಟಕ ಅಧ್ಯಾಯದಲ್ಲಿ ಮಾಹಿತಿ ನವೀಕರಿಸಲಾಗಿದ್ದು, ಹೊಸ ಚಿತ್ರ ಮತ್ತು ವಿವರಣೆ ನೀಡಲಾಗಿದೆ.
ದಕ್ಷಿಣ ಭಾರತದ ಪ್ರಾಚೀನ ರಾಜವಂಶಗಳು, ಉತ್ತರ ಭಾರತದ ರಾಜಮನೆತನಗಳನ್ನು ಕ್ರಮವಾಗಿ ಒಂದೆಡೆ ತಂದು ಪಟ್ಟಿ ಸೇರ್ಪಡೆ ಮಾಡಲಾಗಿದೆ. ವೇದಕಾಲದ ಸಂಸ್ಕೃತಿ, ಹೊಸ ಧರ್ಮಗಳ ಉದಯ ಪಾಠ ಸೇರ್ಪಡೆ ಮಾಡಲಾಗಿದೆ.