
ಹಾಸನ: ರಾಜ್ಯದಲ್ಲಿ ಬಿಸಿಲ ಝಳ ಹೆಚ್ಚುತ್ತಿದ್ದಂತೆ ಲೋಕಸಭಾ ಚುನಾವಣಾ ಕಾವೇರುತ್ತಿದೆ. ಬಿಜೆಪಿ ಪರ ಸಂದೇಶ ಕಳುಹಿಸಿದ್ದಕ್ಕೆ ಚುನಾವಣೆ ಪ್ರಚಾರದ ಆರೋಪದಲ್ಲಿ ಶಿಕ್ಷಣ ಇಲಾಖೆ ನೌಕರರನ್ನು ಅಮಾನತು ಮಾಡಿರುವ ಘಟನೆ ನಡೆದಿದೆ.
ಹಾಸನದ ಡಿಡಿಪಿಐ ಕಚೇರಿಯ ಎಫ್ ಡಿಎ ಬಿ.ಹೆಚ್ ಮಂಜುನಾಥ್ ಅಮಾನತುಗೊಂಡವರು. ಮಂಜುನಾಥ್ ವಾಟ್ಸಪ್ ಗ್ರೂಪ್ ನಲ್ಲಿ ಬಿಜೆಪಿ ಪರ ಸಂದೇಶ ಕಳುಹಿಸಿ ಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಿ ನೀತಿ ಸಂಹಿತೆ ಉಲ್ಲಂಘನೆ ಎಂದು ದೂರು ನೀಡಲಾಗಿತ್ತು. ನಾಗೇಂದ್ರ ಎಂಬುವವರು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಮಂಜುನಾಥ್ ವಿಚಾರಣೆ ಹಾಗೂ ಇಲಾಖೆ ತನಿಖೆ ಕಾಯ್ದಿರಿಸಿ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.