ಬೆಂಗಳೂರು : HRMS ತಂತ್ರಾಂಶದಲ್ಲಿ ನೌಕರರ ಸೇವಾ ವಿವರ ಅಪ್ ಡೇಟ್ ಮಾಡುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ನಾಳೆ ನೌಕರರಿಗೆ ಆನ್ ಲೈನ್ ತರಬೇತಿ ನಡೆಸಲು ನಿರ್ಧರಿಸಲಾಗಿದೆ.
ಸರ್ಕಾರಿ ಸೇವೆಗೆ ಸೇರ್ಪಡೆಗೊಂಡಿರುವ ಎಲ್ಲಾ ಅಧಿಕಾರಿ/ನೌಕರರ ಸೇವಾ ವಹಿಯನ್ನು Electronic Service Register (ESR) ಅನುಷ್ಠಾನಗೊಳಿಸುವಂತೆ ಉಲ್ಲೇಖ-(3) ಮತ್ತು (4)ರ ಸರ್ಕಾರದ ಪತ್ರಗಳಲ್ಲಿ ತಿಳಿಸಿರುತ್ತಾರೆ 2021-22ನೇ ಸಾಲಿನಿಂದ ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲಾ ಅಧಿಕಾರಿ/ನೌಕರರುಗಳ ಸೇವಾ ವಹಿಯನ್ನು “ವಿದ್ಯುನ್ಮಾನ ಸೇವಾ ವಹಿ”Electronic Service Register (ESR) ನಲ್ಲಿಯೇ ಅನುಷ್ಠಾನಗೊಳಿಸಲು ಸಂಬಂಧ ಪಟ್ಟ ಎಲ್ಲಾ ಸಕ್ಷಮ ಪ್ರಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶಿಸಲಾಗಿರುತ್ತದೆ.
ವಿದ್ಯುನ್ಮಾನ ಸೇವಾ ವಹಿ (ಇಎಸ್ಆರ್) ಅನುಷ್ಠಾನಗೊಳಿಸಿರುವ ಬಗ್ಗೆ ಪ್ರಸ್ತುತದವರೆಗೂ ಪ್ರಗತಿ ಕಂಡು ಬಂದಿರುವುದಿಲ್ಲ ಇದೇ ರೀತಿ ಮುಂದುವರೆದಲ್ಲಿ ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿರುವ ಹೆಚ್ಆರ್ಎಂಎಸ್-2ನಲ್ಲಿ ವೇತನ ಪಡೆಯುವುದು ಕಷ್ಟಕರವಾಗುತ್ತದೆ.
ವಿದ್ಯುನ್ಮಾನ ಸೇವಾವಹಿಯು ಸರ್ಕಾರಿ ನೌಕರರ ಒಂದು ಪ್ರಮುಖ ಭಾಗವಾಗಿದ್ದು ಹೆಚ್ಆರ್ಎಂಎನ್-2 ಅನುಷ್ಠಾನಗೊಳ್ಳಲು ವಿದ್ಯುನ್ಮಾನ ಸೇವಾ ವಹಿ (ಇಎಸ್ಆರ್) ಪೂರ್ಣಗೊಳ್ಳುವುದು ಮುಖ್ಯವಾಗಿರುತ್ತದೆ. ಆದ್ದರಿಂದ ವಿದ್ಯುನ್ಮಾನ ಸೇವಾ ವಹಿ (ಇಎಸ್ಆರ್) ಅನುಷ್ಠಾನಗೊಳಿಸುವ ವಿಷಯದ ಕುರಿತು ದಿನಾಂಕ:04/08/2024 ರಂದು 11.00 ಗಂಟೆಗೆ ಜೂಮ್ ಮೀಟಿಂಗ್ ನಲ್ಲಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಉಪನಿರ್ದೇಶಕರುಗಳ ಕಛೇರಿ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನುರಿತ ಕಾರ್ಯನಿರ್ವಾಹಕರಿಗೆ ಹಾಗೂ ಅಧೀಕ್ಷಕರು/ಪತ್ರಾಂಕಿತ ವ್ಯವಸ್ಥಾಪಕರುಗಳಿಗೆ ಮತ್ತು ಜಿಲ್ಲೆಯ ಎಲ್ಲಾ ವೇತನ ಬಟವಾಡ ಆಧಿಕಾರಿಗಳಿಗೆ ಹೆಚ್.ಆರ್.ಎಂ.ಎಸ್ ನಲ್ಲಿ ವಿದ್ಯುನ್ಮಾನ ಸೇವಾ ವಹಿ (ಇಎಸ್ಆರ್) ಅನುಷ್ಠಾನಗೊಳಿಸುವ ತರಬೇತಿಗೆ ಕಡ್ಡಾಯವಾಗಿ ಹಾಜರಾಗಲು ತಿಳಿಸಿದೆ.